ಮಗಳಿಗೆ ಕಿಚ್ಚ ಸುದೀಪ್ ಬರೆದ ಭಾವುಕ ಸಂದೇಶ

ಬುಧವಾರ, 20 ಮೇ 2020 (09:32 IST)
ಬೆಂಗಳೂರು: ಕಿಚ್ಚ ಸುದೀಪ್ ಗೆ ಈವತ್ತು ಪುತ್ರಿ ಸಾನ್ವಿ ಹುಟ್ಟುಹಬ್ಬದ ಸಂಭ್ರಮ. ಹೀಗಾಗಿ ಮಗಳಿಗೆ ಕಿಚ್ಚ ಸಾಮಾಜಿಕ ಜಾಲತಾಣದಲ್ಲಿ ಹಳೆಯ ಫೋಟೋಗಳ ಜತೆ ಭಾವುಕ ಸಂದೇಶ ಬರೆದುಕೊಂಡಿದ್ದಾರೆ.

 

ಪಕ್ಕಾ ಕನ್ನಡದಲ್ಲಿ ಕವನವನ್ನೇ ಬರೆದು ಮಗಳಿಗೆ ಹುಟ್ಟುಹಬ್ಬದ ಶುಭ ಹಾರೈಸಿದ್ದಾರೆ ಕಿಚ್ಚ. ನೆನ್ನೆ ಮೊನ್ನೆ ಇದ್ದ ಹಾಗಿದೆ, ಹೇಗಪ್ಪಾ ನಂಬೋದು, ನನ್ನ ಮಗಳೀಗ, ಹದಿನಾರು ವರುಷ ಎಂದ ಕಿಚ್ಚ ಪುಟ್ಟ ಕವಿತೆಯನ್ನೇ ಬರೆದಿದ್ದಾರೆ.

‘ನೀ ಇಟ್ಟ ಅಂಬೆಗಾಲು, ಮುದ್ದಾದ ಮೊದಲುಗಳು, ಕೂಡಿಟ್ಟಿರುವೆ ನಾ, ಒಂದೊಂದು ನಿಮಿಷ, ಎದೆಯೆತ್ತರ ಬೆಳೆದಿರೊ, ಕನಸು ನೀನು, ನಿನ್ನಿಂದಲೇ ಕಲಿಯುವ, ಕೂಸು ಸಾನು, ಆಸೆ ಬುರುಕ ಅಪ್ಪ ನಾನು, ಮತ್ತೆ ಮಗುವಾಗು ನೀನು’ ಎಂದು ಕಿಚ್ಚ ಕವನ ಬರೆದಿದ್ದಾರೆ. ಅದರ ಜತೆಗೆ ಮಗಳು ಚಿಕ್ಕಂದಿನಿಂದ ಇಂದಿನವರೆಗಿನ ಫೋಟೋಗಳ ಸಂಗ್ರಹ ಹಾಕಿ ಶುಭ ಹಾರೈಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಎರಡನೇ ಹಾಡಿನ ರಿಲೀಸ್ ಗೆ ರೆಡಿಯಾದ ಕೋಟಿಗೊಬ್ಬ 3