ಬೆಂಗಳೂರು: ಕೊರೋನಾದಿಂದಾಗಿ ಮದುವೆ ಸಮಾರಂಭಗಳು ಸರಳವಾಗಿ ಸದ್ದಿಲ್ಲದೇ ನಡೆಯುತ್ತಿದೆ. ಆದರೆ ಇಲ್ಲೊಬ್ಬ ವಧೂ ವರರು ತಮ್ಮ ಮದುವೆ ದಿನ ಕೊರೋನಾದಿಂದ ಸಂಕಷ್ಟಕ್ಕೀಡಾದವರಿಗೆ ಆಹಾರ ಕಿಟ್ ನೀಡಿ ಸುದ್ದಿಯಾಗಿದ್ದಾರೆ.
ಅರ್ಜುನ್ ಮತ್ತು ನಂದಿನಿ ಎಂಬ ಜೋಡಿ ತಮ್ಮ ಮದುವೆ ದಿನ ಹೆಚ್ಚು ಆಡಂಭರ ಮಾಡದೇ ಆ ಖರ್ಚಿನಲ್ಲಿ ಆಹಾರ ಕಿಟ್ ನೀಡಿರುವುದಲ್ಲದೆ, ಮುಖ್ಯಮಂತ್ರಿಗಳ ಪರಿಹಾರ ನಿಧಿಗೂ ದೇಣಿಗೆ ನೀಡಿದ್ದಾರೆ.
ಈ ಅಭಿಮಾನಿಗಳ ಕೆಲಸಕ್ಕೆ ಕಿಚ್ಚ ಸುದೀಪ್ ಮೆಚ್ಚುಗೆ ವ್ಯಕ್ತಪಡಿಸಿದ್ದು, ಈ ದಂಪತಿ ಉಳಿದವರಿಗೆ ಮಾದರಿಯಾಗಿದ್ದಾರೆ. ಇಂತಹ ಕೆಲಸಗಳು ಮತ್ತಷ್ಟು ನಡೆಯಲಿ ಎಂದು ಶುಭ ಹಾರೈಸಿದ್ದಾರೆ.