Select Your Language

Notifications

webdunia
webdunia
webdunia
webdunia

ರಾಬರ್ಟ್ ಸಿನಿಮಾ ಆಪ್ ನಲ್ಲಿ ಬಿಡುಗಡೆ ಮಾಡಲು ಬಿಗ್ ಆಫರ್?!

ರಾಬರ್ಟ್
ಬೆಂಗಳೂರು , ಮಂಗಳವಾರ, 26 ಮೇ 2020 (09:09 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಬಿಡುಗಡೆ ಸಿದ್ಧವಾಗಿದೆ. ಆದರೆ ಲಾಕ್ ಡೌನ್ ನಿಂದಾಗಿ ಸದ್ಯಕ್ಕೆ ಸಾಧ‍್ಯವಾಗುತ್ತಿಲ್ಲ.


ಪರಿಸ್ಥಿತಿ ಸುಧಾರಿಸಿದ ಕೂಡಲೇ ರಾಬರ್ಟ್ ನಿಮ್ಮ ಮುಂದೆ ಬರಲಿದೆ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ನಿನ್ನೆ ಪೋಸ್ಟರ್ ಲಾಂಚ್ ಮಾಡಿದ ಬಳಿಕ ಅಭಿಮಾನಿಗಳಿಗೆ ಸಂದೇಶ ನೀಡಿದ್ದಾರೆ.

ಹಾಗಿದ್ದರೂ ರಾಬರ್ಟ್ ಬಗ್ಗೆ ಅಭಿಮಾನಿಗಳಲ್ಲಿ ಭಾರೀ ಕ್ರೇಜ್ ಇದೆ. ಹೀಗಿರುವಾಗ ಸಿನಿಮಾವನ್ನು ತಮ್ಮ ಆಪ್ ನಲ್ಲಿ ಬಿಡುಗಡೆ ಮಾಡಲು ಅಮೆಝೋನ್ ಪ್ರೈಮ್ ಭಾರೀ ಮೊತ್ತಕ್ಕೆ ಹಕ್ಕು ಕೇಳಿದೆ ಎಂಬ ಸುದ್ದಿಯಿದೆ. ಆದರೆ ಇದನ್ನು ಚಿತ್ರತಂಡ ನಿರಾಕರಿಸಿದೆಯಂತೆ.

ಶೇ. 99 ರಷ್ಟು ಕೆಲಸ ಮುಗಿಸಿರುವ ರಾಬರ್ಟ್ ಲಾಕ್ ಡೌನ್ ಮುಗಿದ ಕೂಡಲೇ ಚಿತ್ರಮಂದಿರಗಳ ಮೂಲಕವೇ ತೆರೆ ಕಾಣಿಸಲು ಚಿತ್ರತಂಡ ಸಿದ್ಧತೆ ನಡೆಸಿದೆ. ಡಿ ಬಾಸ್ ಮಾಸ್ ಅಭಿಮಾನಿಗಳನ್ನು ರಂಜಿಸುವುದೇ ಚಿತ್ರತಂಡದ ಮುಖ್ಯ ಉದ್ದೇಶವಾಗಲಿದೆ. ಆಪ್ ಮೂಲಕ ಬಿಡುಗಡೆ ಮಾಡಿದರೆ ಈ ಪರಿಯ ಪ್ರೋತ್ಸಾಹ, ಕ್ರೇಜ್ ಇರದು. ಹೀಗಾಗಿ ಹಣದ ಹಿಂದೆ ಹೋಗದೇ ಚಿತ್ರಮಂದಿರದ ಮೂಲಕವೇ ಬಿಡುಗಡೆ ಮಾಡಲು ಚಿತ್ರತಂಡ ತೀರ್ಮಾನಿಸಿದೆಯಂತೆ.

Share this Story:

Follow Webdunia kannada

ಮುಂದಿನ ಸುದ್ದಿ

ಧಾರಾವಾಹಿ ಪ್ರಿಯರಿಗೆ ಗುಡ್ ನ್ಯೂಸ್ ; ಶೂಟಿಂಗ್ ಶುರು