Publish Date: Mon, 25 May 2020 (19:08 IST)
Updated Date: Mon, 25 May 2020 (19:11 IST)
ಲಾಕ್ ಡೌನ್ ಕಾರಣದಿಂದ ಕಳೆದೆರಡು ತಿಂಗಳಿಂದ ಸ್ಥಗಿತಗೊಂಡಿದ್ದ ಧಾರವಾಹಿಗಳ ಚಿತ್ರೀಕರಣ ಆರಂಭಗೊಂಡಿದ್ದು, ಕಿರುತೆರೆ ವೀಕ್ಷಕರಿಗೆ ಗುಡ್ ನ್ಯೂಸ್ ಸಿಕ್ಕಂತಾಗಿದೆ.
ಕೊರೊನಾ ವೈರಸ್ ವಿರುದ್ಧ ಹೋರಾಟದ ಹಿನ್ನೆಲೆಯಲ್ಲಿ ಜಾರಿಮಾಡಲಾಗಿದ್ದ ಲಾಕ್ ಡೌನ್ ನಿಂದಾಗಿ ಚಿತ್ರೀಕರಣಕ್ಕೆ ಬ್ರೇಕ್ ಬಿದ್ದಿತ್ತು. ಇದೀಗ ಮತ್ತೆ ಶೂಟಿಂಗ್ ಶುರು ಮಾಡಲಾಗಿದ್ದು, ಇದರಿಂದ ಕಿರುತೆರೆ ಚೇತರಿಕೆಯತ್ತ ಹೆಜ್ಜೆಯಿಡಲಾರಂಭಿಸಿದೆ.
ಶೂಟಿಂಗ್ ವೇಳೆ ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಸರ್ ಬಳಕೆ ಕಡ್ಡಾಯ ಮಾಡಲಾಗಿದೆ. 20 ಜನಕ್ಕಿಂತ ಹೆಚ್ಚು ಜನರು ಶೂಟಿಂಗ್ ಸ್ಪಾಟ್ ಗಳಲ್ಲಿ ಇರಬಾರದು ಎನ್ನಲಾಗಿದೆ.