Publish Date: Mon, 25 May 2020 (11:01 IST)
Updated Date: Mon, 25 May 2020 (11:03 IST)
ಬೆಂಗಳೂರು: ಕರ್ನಾಟಕ ಆರೋಗ್ಯ ಇಲಾಖೆ ಪ್ರಸ್ತುಪಡಿಸುವ ಕೊರೋನಾ ಕುರಿತ ಜಾಗೃತಿ ಹಾಡು ‘ಬದಲಾಗು ನೀನು’ ಇಂದು ಬಿಡುಗಡೆಯಾಗುತ್ತಿದೆ. ಈ ಹಾಡಿಗೆ ಈಗ ಮತ್ತಷ್ಟು ಸೆಲೆಬ್ರಿಟಿಗಳ ಸೇರ್ಪಡೆಯಾಗಿದೆ.
ಹಾಡಿನಲ್ಲಿ ಸಿನಿ, ಕ್ರಿಕೆಟ್ ದಿಗ್ಗಜರು ಪಾಲ್ಗೊಂಡಿದ್ದಾರೆ. ಹಾಡಿನ ಬಗ್ಗೆ ಪ್ರಕಟಣೆ ನೀಡಲಾದ ಫೋಟೋದಲ್ಲಿ ದರ್ಶನ್, ಪುನೀತ್, ಶಿವರಾಜ್ ಕುಮಾರ್, ಅನಿಲ್ ಕುಂಬ್ಳೆ ಸೇರಿದಂತೆ ಘಟಾನುಘಟಿಗಳಿದ್ದಾರೆ. ಆದರೆ ಕಿಚ್ಚ ಸುದೀಪ್, ಯಶ್ ಫೋಟೋ ಇದರಲ್ಲಿ ಕಂಡುಬಂದಿರಲಿಲ್ಲ.
ಹೀಗಾಗಿ ಈ ಇಬ್ಬರೂ ಸೆಲೆಬ್ರಿಟಿಗಳ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಯಶ್ ಸೇರ್ಪಡೆಯಾಗಿದ್ದಾರೆ. ಜತೆಗೆ ರಾಹುಲ್ ದ್ರಾವಿಡ್ ಫೋಟೋವೋ ಪ್ರೋಮೋದಲ್ಲಿ ಕಂಡುಬರುತ್ತಿದೆ. ಇದರಿಂದ ಯಶ್ ಅಭಿಮಾನಿಗಳು ಖುಷಿಯಾಗಿದ್ದಾರೆ.