Publish Date: Mon, 16 Mar 2020 (09:17 IST)
Updated Date: Mon, 16 Mar 2020 (09:18 IST)
ಬೆಂಗಳೂರು: ಕೊರೋನಾವೈರಸ್ ಭೀತಿಯಿಂದಾಗಿ ಚಿತ್ರರಂಗ ಸ್ತಬ್ಧವಾಗಿದ್ದರೆ, ಅತ್ತ ಧಾರವಾಹಿಗಳು ಮಾತ್ರ ಎಂದಿನಂತೆ ಕೆಲಸ ನಿರ್ವಹಿಸುತ್ತಿವೆ.
ಸಿನಿಮಾ ಚಿತ್ರೀಕರಣಗಳು ಹಲವು ಸ್ಥಗಿತಗೊಂಡಿದ್ದು, ಥಿಯೇಟರ್ ಗಳೂ ಬಂದ್ ಆಗಿವೆ. ಆದರೆ ಧಾರವಾಹಿಗಳಿಗೆ ಇದು ಅನ್ವಯವಾಗಿಲ್ಲ.
ಯಾಕೆಂದರೆ ಧಾರವಾಹಿ ನಿತ್ಯವೂ ಒಂದೊಂದು ಎಪಿಸೋಡ್ ನೀಡಲೇಬೇಕಿದೆ. ಹೀಗಾಗಿ ಧಾರವಾಹಿ ತಂಡಗಳು ಎಂದಿನಂತೆ ಮಾಸ್ಕ್ ಇತ್ಯಾದಿ ಸುರಕ್ಷತಾ ಕ್ರಮ ಕೈಗೊಂಡು ಚಿತ್ರೀಕರಣ ಮುಂದುವರಿಸಿವೆ.