ಚಿತ್ರರಂಗಕ್ಕೆ ಕಾಲಿಡುವ ಹೊಸಬರಿಗೂ ಸಲ್ಮಾನ್ ಇದೇ ಪ್ರೀತಿ ತೋರುವುದುಂಟು. ಆದರೆ ಬಹಳಷ್ಟು ಮಂದಿ ಇದನ್ನು ಅರ್ಥಮಾಡಿಕೊಳ್ಳದೆ ದೂರ ಸರಿಯುತ್ತಾರಷ್ಟೇ. ಸೋದರಿಯ ಎಲ್ಲಾ ಆಸೆ ಆಕಾಂಕ್ಷೆಗಳನ್ನು ಕಾಲಕಾಲಕ್ಕೆ ಈಡೇರಿಸುತ್ತಾ ಬಂದಿರುವುದು ಅವರ ವಿಶೇಷ.
ಸಲ್ಮಾನ್ ಖಾನ್ ಅವರಿಗೆ ತಂಗಿ ಎಂದರೆ ಪ್ರಾಣ. ಜಗತ್ತಿಗೆ ಅವರು ಬ್ಯಾಡ್ಬಾಯ್ ಆಗಿದ್ದರೂ ಸಹೋದರಿಯ ಪಾಲಿಗೆ ಅಚ್ಚುಮೆಚ್ಚಿನ ಅಣ್ಣ. ಸಲ್ಮಾನ್ ತನಗಿಷ್ಟವಾದವರಿಗೆ ಪ್ರೀತಿಯ ಮಹಾಪೂರವನ್ನೇ ಹರಿಸುವ ಸಂಗತಿ ಬಾಲಿವುಡ್ನಲ್ಲಿ ಎಲ್ಲರಿಗೂ ಗೊತ್ತು.
ಸದ್ಯಕ್ಕೆ ಬಂದಿರುವ ಸುದ್ದಿ ಎಂದರೆ ಸಲ್ಲು ತಂಗಿ ಅಲ್ವಿರಾ ಅಗ್ನಿಹೋತ್ರಿಗೆ ಈದ್ ಹಾಗೂ ದೀಪಾವಳಿ ಎರಡೂ ಸೇರಿ ಭರ್ಜರಿ ಗಿಫ್ಟ್ ನೀಡಿದ್ದಾರೆ ಎನ್ನಲಾಗಿದೆ. ಈ ಮೂಲಕ ದುಬಾರಿ ಬ್ರೇಸ್ಲೈಟ್ ಒಡತಿಯಾಗಿದ್ದಾರಂತೆ. ಸಲ್ಮಾನ್ ಖಾನ್ ನೀಡಿರುವ ವಜ್ರದ ಬ್ರೇಸ್ಲೈಟ್ 1.25 ಕೋಟಿ ರೂಪಾಯಿಯದ್ದು ಎನ್ನಲಾಗಿದೆ.
ಸಲ್ಮಾನ್ ಅವರ ಮ್ಯಾನೇಜರ್ ರೇಷ್ಮಾ ಶೆಟ್ಟಿ ಅವರ ಗೆಳೆಯರೊಬ್ಬರ ಆಭರಣ ಅಂಗಡಿಯಲ್ಲಿ ಈ ಬ್ರೇಸ್ಲೈಟ್ ಸಿದ್ಧಪಡಿಸಲಾಗಿದೆ. ಹಲವು ದಿನಗಳಿಂದ ಅವರು ಯಾವುದೇ ಗಿಫ್ಟ್ ನೀಡಿರಲಿಲ್ಲ. ಹೀಗಾಗಿ ಈ ಉಡುಗೊರೆಯನ್ನು ತಂಗಿಗೆ ನೀಡಿದ್ದಾರಂತೆ. ಹೀಗೆಂದು ಮುಂಬೈನ ಕೆಲ ಸ್ಥಳೀಯ ಪತ್ರಿಕೆಗಳು ಬರೆದುಕೊಂಡಿವೆ.
ಈ ಹಿಂದೆ ಸಲ್ಮಾನ್ ಮಾಜಿ ಪ್ರಿಯತಮೆ ಕತ್ರೀನಾ ಕೈಫ್ಗೆ ಸ್ಪೋಟರ್್ ಯುಟಿಲಿಟಿ ವೆಹಿಕಲ್, ಆಭರಣ, ಅಭಿಮಾನಿಯ ಮಗನೊಬ್ಬನಿಗೆ ಕಂಪ್ಯೂಟರ್, ಲ್ಯಾಪ್ಟಾಪ್ ಕೊಡಿಸಿದ್ದರಂತೆ.