Publish Date: Fri, 16 Sep 2022 (09:00 IST)
Updated Date: Fri, 16 Sep 2022 (09:25 IST)
ಹೈದರಾಬಾದ್: ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಸಿನಿಮಾ ಎರಡನೇ ಹಂತದ ಚಿತ್ರೀಕರಣ ಇನ್ನೇನು ಆರಂಭವಾಗಬೇಕಿತ್ತು.
ಆದರೆ ಈಗ ಪ್ರಭಾಸ್ ಕಾರಣಕ್ಕೆ ಮತ್ತೆ ಚಿತ್ರೀಕರಣ ಮುಂದೂಡಿಕೆಯಾಗಿದೆ. ಪ್ರಭಾಸ್ ದೊಡ್ಡಪ್ಪ, ನಟ ಕೃಷ್ಣಂ ರಾಜು ಇತ್ತೀಚೆಗೆ ನಿಧನರಾಗಿದ್ದರು.
ಇದೀಗ ಪ್ರಭಾಸ್ ಮನೆಯಲ್ಲಿ ಸಾವಿನ ಸೂತಕದ ಛಾಯೆಯಿದ್ದು, ಸದ್ಯಕ್ಕೆ ಪ್ರಭಾಸ್ ಶೂಟಿಂಗ್ ನಿಂದ ಬಿಡುವು ಪಡೆದುಕೊಂಡಿದ್ದಾರೆ. ಹೀಗಾಗಿ ಸಲಾರ್ ಶೂಟಿಂಗ್ ಮುಂದೂಡಿಕೆಯಾಗಿದೆ.