Select Your Language

Notifications

webdunia
webdunia
webdunia
webdunia

ಈ ಖ್ಯಾತ ನಟಿಯ ಜೀವನ ಚರಿತ್ರೆಯಲ್ಲಿ ನಟಿಸಲಿದ್ದಾರಂತೆ ಸಾಯಿ ಪಲ್ಲವಿ

ಈ ಖ್ಯಾತ ನಟಿಯ ಜೀವನ ಚರಿತ್ರೆಯಲ್ಲಿ ನಟಿಸಲಿದ್ದಾರಂತೆ ಸಾಯಿ ಪಲ್ಲವಿ
ಹೈದರಾಬಾದ್ , ಮಂಗಳವಾರ, 13 ಅಕ್ಟೋಬರ್ 2020 (08:15 IST)
ಹೈದರಾಬಾದ್ : ಟಾಲಿವುಡ್ ನ ಖ್ಯಾತ ನಟಿ ಸಾಯಿಪಲ್ಲವಿ ಅವರು ದಕ್ಷಿಣ ಭಾರತದ ಸಿನಿಮಾ ರಂಗದಲ್ಲಿ ನಟಿಸಿ ಮಿಂಚಿ ಮರೆಯಾದ ಖ್ಯಾತ ನಟಿಯೊಬ್ಬರ ಜೀವನ ಚರಿತ್ರೆಯಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ.

ಹೌದು. ತೊಂಬತ್ತರ ದಶಕದಲ್ಲಿ ಸಿನಿಮಾರಂಗವನ್ನು ಆಳಿದ ಬ್ಯೂಟಿಫುಲ್ ನಟಿ ಸೌಂದರ್ಯ ಅವರ ಜೀವನ ಚರಿತ್ರೆಯನ್ನು ನಿರ್ಮಾಪಕರು ಸಿನಿಮಾ ಮಾಡಲು ನಿರ್ಧರಿಸಿದ್ದು, ಅವರ ಪಾತ್ರವನ್ನು ನಟಿ ಸಾಯಿ ಪಲ್ಲವಿ ಮಾಡಲಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ನಿರ್ಮಾಪಕರು ನಟಿ ಸಾಯಿ ಪಲ್ಲವಿ ಜೊತೆ ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಪೊನ್ನುಮಣಿ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಸೌಂದರ್ಯ ರಜನೀಕಾಂತ್, ಕಮಲ್ ಹಾಸನ್, ವಿಷ್ಣು ವರ್ಧನ್, ರವಿಚಂದ್ರನ್, ನಾಗಾರ್ಜುನ್ ಹಲವು ಖ್ಯಾತ ನಟರ ಜೊತೆ ನಟಿಸಿದ್ದಾರೆ. ಆದರೆ ಅವರು ತಮ್ಮ ಸಹೋದರನ ಜೊತೆ ಬಿಜೆಪಿ ಪ್ರಚಾರಕ್ಕೆ ಹೋಗಿದ್ದಾಗ ಏಪ್ರಿಲ್ 17,2004ರಂದು ಬೆಂಗಳೂರು ಬಳಿ ನಡೆದ ಏರ್ ಕ್ರ್ಯಾಶ್ ನಿಂದಾಗಿ  31ನೇ ವಯಸ್ಸಿನಲ್ಲಿ ಸಾವನಪ್ಪಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೋರ್ಟ್ ಮೆಟ್ಟಿಲೇರಿದ ನಟ ಶಾರುಖ್, ಅಮೀರ್, ಸಲ್ಮಾನ್ ಖಾನ್