Publish Date: Thu, 08 Oct 2020 (09:43 IST)
Updated Date: Thu, 08 Oct 2020 (09:44 IST)
ಹೈದರಾಬಾದ್ : ಇತ್ತೀಚೆಗಷ್ಟೇ ನಟಿ ಕಾಜಲ್ ಅಗರ್ ವಾಲ್ ಅವರು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಇದೀಗ ಸ್ವತಃ ನಟಿ ಕಾಜಲ್ ಅವರೇ ನಾನು ಮದುವೆಯಾಗುತ್ತಿದ್ದೇನೆ ಎಂದು ಅಧಿಕೃತ ಘೋಷಣೆ ಮಾಡಿದ್ದಾರೆ.
ಹೌದು. ನಟಿ ಕಾಜಲ್ ಅಗರ್ ವಾಲ್ ಅವರು ಉದ್ಯಮಿ ಗೌತಮ್ ಜೊತೆ ಅಕ್ಟೋಬರ್ 30ರಂದು ಮುಂಬೈನಲ್ಲಿ ಮದುವೆಯಾಗಲಿದ್ದೇನೆ. ಈ ಸಮಾರಂಭಕ್ಕೆ ಕುಟುಂಬಸ್ಥರು, ಆಪ್ತರು ಮಾತ್ರ ಭಾಗಿಯಾಗಲಿದ್ದಾರೆ ಎಂದು ಟ್ವೀಟರ್ ನಲ್ಲಿ ಮಾಹಿತಿ ನೀಡಿದ್ದಾರೆ.
ಹಾಗೇ ತನ್ನ ಯಶಸ್ಸಿಗೆ ಕಾರಣರಾದ ಎಲ್ಲಾ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿ, ಮದುವೆಯ ನಂತರವೂ ಸಿನಿಮಾರಂಗದಲ್ಲಿ ಮುಂದುವರಿಯುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.