Publish Date: Wed, 07 Oct 2020 (10:17 IST)
Updated Date: Wed, 07 Oct 2020 (10:20 IST)
ದುಬೈ: ಗಾಯಗೊಂಡು ಐಪಿಎಲ್ 13 ರಿಂದ ಹೊರಬಂದ ಭುವನೇಶ್ವರ್ ಕುಮಾರ್ ಸ್ಥಾನಕ್ಕೆ ಬದಲಿ ಆಟಗಾರನನ್ನು ಸನ್ ರೈಸರ್ಸ್ ಹೈದರಾಬಾದ್ ಘೋಷಿಸಿದೆ.
ಭುವಿ ಜಾಗಕ್ಕೆ ಯುವ ವೇಗಿ ಪೃಥ್ವಿ ರಾಜ್ ಯಾರಾ ಹೆಸರನ್ನು ಘೋಷಿಸಿದೆ. 22 ವರ್ಷದ ಪೃಥ್ವಿ ರಾಜ್ ಆಂಧ‍್ರ ಮೂಲದವರು. ಇದುವರೆಗೆ 11 ಪ್ರಥಮ ದರ್ಜೆ ಕ್ರಿಕೆಟ್ ಆಡಿರುವ ಪೃಥ್ವಿ 39 ವಿಕೆಟ್ ಕಬಳಿಸಿದ್ದಾರೆ. ಕಳೆದ ವರ್ಷ ಪೃಥ್ವಿ ರಾಜ್ ಕೆಕೆಆರ್ ತಂಡದ ಪರ ಆಡಿದ್ದರು. ಸದ್ಯದಲ್ಲೇ ಅವರು ಯುಎಇಗೆ ತೆರಳಿ ಹೈದರಾಬಾದ್ ತಂಡವನ್ನು ಕೂಡಿಕೊಳ್ಳಲಿದ್ದಾರೆ.