Publish Date: Sun, 11 Oct 2020 (10:21 IST)
Updated Date: Sun, 11 Oct 2020 (10:22 IST)
ದುಬೈ: ಐಪಿಎಲ್ 13 ರ ಇಂದಿನ ಮೊದಲ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲಿದೆ.
ಈಗಷ್ಟೇ ಜಯದ ಹಾದಿಯಲ್ಲಿರುವ ಹೈದರಾಬಾದ್ ಗೆ ರಾಜಸ್ಥಾನ್ ಎದುರಾಳಿಯಾಗಿದೆ. ಅತ್ತ ಬ್ಯಾಟಿಂಗ್ ವೈಫಲ್ಯ ಕಾಣುತ್ತಿರುವ ರಾಜಸ್ಥಾನ್ ಗೆ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಪುನರಾಗಮನ ಚೇತರಿಕೆ ನೀಡಬಹುದು. ಹೈದರಾಬಾದ್ ಗೆ ಬೌಲಿಂಗ್ ಶಕ್ತಿ. ಕಳೆದ ಪಂದ್ಯದಲ್ಲಿ ಬ್ಯಾಟಿಂಗ್ ನಲ್ಲೂ ಪರಾಕ್ರಮ ಮೆರೆದಿತ್ತು. ಹೀಗಾಗಿ ಈ ಪಂದ್ಯದಲ್ಲಿ ಪೈಪೋಟಿ ನಿರೀಕ್ಷಿಸಬಹುದು. ಪಂದ್ಯ ಅಪರಾಹ್ನ 3.30 ಕ್ಕೆ ಆರಂಭವಾಗಲಿದೆ.