Select Your Language

Notifications

webdunia
webdunia
webdunia
webdunia

ಪ್ರಭಾಸ್-ದೀಪಿಕಾ ಸಿನಿಮಾದಲ್ಲಿ ಬಾಲಿವುಡ್ ನ ಈ ನಟ ನಟಿಸಲಿದ್ದಾರಂತೆ

ಪ್ರಭಾಸ್-ದೀಪಿಕಾ ಸಿನಿಮಾದಲ್ಲಿ ಬಾಲಿವುಡ್ ನ ಈ ನಟ ನಟಿಸಲಿದ್ದಾರಂತೆ
ಹೈದರಾಬಾದ್ , ಶನಿವಾರ, 10 ಅಕ್ಟೋಬರ್ 2020 (09:36 IST)
ಹೈದರಾಬಾದ್ : ಟಾಲಿವುಡ್ ನಟ ಪ್ರಭಾಸ್ ಅಭಿನಯದ ‘ಪ್ಯಾನ್ ಇಂಡಿಯನ್’ ಚಿತ್ರದಲ್ಲಿ ನಾಯಕಿಯಾಗಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ನಟಿಸುತ್ತಿರುವ ವಿಚಾರ ಎಲ್ಲರಿಗೂ ತಿಳಿದೆ ಇದೆ. ಆದರೆ ಈ ಸಿನಿಮಾದಲ್ಲಿ  ಬಾಲಿವುಡ್ ನಟರೊಬ್ಬರು ನಟಿಸುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಹೌದು, ಇದು ಪ್ರಭಾಸ್ ಅವರ ಅಭಿನಯದ 21ನೇ ಚಿತ್ರವಾಗಿದ್ದು, ಇದನ್ನು ವಿಜಯಂತಿ ನಿರ್ಮಿಸುತ್ತಿದ್ದಾರೆ.  ಹಾಗೇ ನಾಗ್ ಅಶ್ವಿನ್ ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದು, ಈ ಚಿತ್ರ ತಮಿಳು, ತೆಲುಗು, ಮಲಯಾಲಂ, ಕನ್ನಡ ಮತ್ತು ಹಿಂದಿಯಲ್ಲಿ ಮೂಡಿಬರಲಿದೆ.
ಆದರೆ ಇದೀಗ ಈ ಸಿನಿಮಾದ ಬಗ್ಗೆ ಬೃಹತ್ ಘೋಷಣೆಯೊಂದು ಕೇಳಿಬಂದಿದ್ದು, ಇದರಲ್ಲಿ ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರು  ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ ಎಂದು ಅಧಿಕೃತ ಮಾಹಿತಿ ಹೊರಬಿದ್ದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಡಾ. ರಾಜ್ ಗೆ ಹಿಟ್ ಚಿತ್ರ ಕೊಟ್ಟಿದ್ದ ನಿರ್ದೇಶಕ ವಿಜಯ್ ರೆಡ್ಡಿ ನಿಧನ