Select Your Language

Notifications

webdunia
webdunia
webdunia
webdunia

ಡಾ. ರಾಜ್ ಗೆ ಹಿಟ್ ಚಿತ್ರ ಕೊಟ್ಟಿದ್ದ ನಿರ್ದೇಶಕ ವಿಜಯ್ ರೆಡ್ಡಿ ನಿಧನ

ಡಾ. ರಾಜ್ ಗೆ ಹಿಟ್ ಚಿತ್ರ ಕೊಟ್ಟಿದ್ದ ನಿರ್ದೇಶಕ ವಿಜಯ್ ರೆಡ್ಡಿ ನಿಧನ
ಬೆಂಗಳೂರು , ಶನಿವಾರ, 10 ಅಕ್ಟೋಬರ್ 2020 (09:18 IST)
ಬೆಂಗಳೂರು: ವರನಟ ಡಾ. ರಾಜ್ ಕುಮಾರ್ ಗೆ ಅನೇಕ ಹಿಟ್ ಚಿತ್ರಗಳನ್ನು ಕೊಟ್ಟಿದ್ದ ಖ್ಯಾತ ನಿರ್ದೇಶಕ ವಿಜಯ್ ರೆಡ್ಡಿ ನಿಧನರಾಗಿದ್ದಾರೆ.


ವರನಟನಿಗೆ ಗಂಧದ ಗುಡಿ, ಮಯೂರ, ನಾ ನಿನ್ನ ಮರೆಯಲಾರೆ, ಭಕ್ತ ಪ್ರಹ್ಲಾದ ಹಾಗೂ ಹಲವು ಸಿನಿಮಾಗಳನ್ನು ನಿರ್ದೇಶಿಸಿದ್ದ ವಿಜಯ್ ರೆಡ್ಡಿ ನಿನ್ನೆ ಚೆನ್ನೈನಲ್ಲಿ ನಿಧನರಾಗಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು. ಅವರ ನಿಧನಕ್ಕೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್, ಡಾ. ಶಿವರಾಜ್ ಕುಮಾರ್ ಸೇರಿದಂತೆ ಸಿನಿ ಗಣ್ಯರು ಕಂಬನಿ ಮಿಡಿದಿದ್ದಾರೆ. ಅವರ ಜತೆ ಭಕ್ತ ಪ್ರಹ್ಲಾದ ಸಿನಿಮಾದಲ್ಲಿ ನಟಿಸಿರುವುದು ನನ್ನ ಭಾಗ್ಯ ಎಂದು ಪುನೀತ್ ಸಂತಾಪ ಸಂದೇಶದಲ್ಲಿ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕ್ರಿಸ್ ಮಸ್ ಗೆ ಈ ಸಿನಿಮಾ ಪಕ್ಕಾ ರಿಲೀಸ್