Select Your Language

Notifications

webdunia
webdunia
webdunia
webdunia

ಸಿಎಸ್ ಕೆ ಸೋಲಿಗೆ ಜೀವಾ ಧೋನಿಗೆ ಸೋಷಿಯಲ್ ಮೀಡಿಯಾದಲ್ಲಿ ಬೆದರಿಕೆ!

ಸಿಎಸ್ ಕೆ ಸೋಲಿಗೆ ಜೀವಾ ಧೋನಿಗೆ ಸೋಷಿಯಲ್ ಮೀಡಿಯಾದಲ್ಲಿ ಬೆದರಿಕೆ!
ದುಬೈ , ಶನಿವಾರ, 10 ಅಕ್ಟೋಬರ್ 2020 (09:03 IST)
ದುಬೈ: ಸಿಎಸ್ ಕೆ ಐಪಿಎಲ್ 13 ರಲ್ಲಿ ಹೀನಾಯ ಪ್ರದರ್ಶನ ನೀಡುತ್ತಿರುವುದಕ್ಕೆ ಆಕ್ರೋಶಗೊಂಡಿರುವ ಅಭಿಮಾನಿಯೊಬ್ಬ ನಾಯಕ ಧೋನಿ ಪುತ್ರಿ ಜೀವಾಗೆ ಬೆದರಿಕೆ ಹಾಕಿದ್ದಾರೆ.


ಸಾಮಾಜಿಕ ಜಾಲತಾಣದಲ್ಲಿ ಧೋನಿ ಪುತ್ರಿಯನ್ನು ಮಾನಭಂಗ ಮಾಡುವುದಾಗಿ ಅಥವಾ ದೈಹಿಕ ಹಲ್ಲೆ ನಡೆಸುವುದಾಗಿ ವ್ಯಕ್ತಿಯೊಬ್ಬ ಬೆದರಿಕೆ ಹಾಕಿದ್ದು, ಇದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಇಂತಹ ವ್ಯಕ್ತಿಗಳ ಮನಸ್ಥಿತಿಯ ಬಗ್ಗೆ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಿಎಸ್ ಕೆ ಸೋಲಿಗೆ ಐದು ವರ್ಷದ ಧೋನಿ ಪುತ್ರಿ ಜೀವಾ ಮೇಲೆ ಇಂತಹ ಕೀಳುಮಟ್ಟದ ಹೇಳಿಕೆ ನೀಡಿರುವುದು ನಿಜಕ್ಕೂ ಖೇದಕರ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 13: ಡೆಲ್ಲಿ ಎದುರು ರಾಜಸ್ಥಾನ್ ಶರಣಾಗತಿ