Publish Date: Sat, 10 Oct 2020 (08:57 IST)
Updated Date: Sat, 10 Oct 2020 (08:59 IST)
ದುಬೈ: ಪ್ರಬಲ ತಂಡವಾಗಿರುವ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಸುಲಭವಾಗಿ ಶರಣಾಗತಿಯಾಗಿದೆ. 46 ರನ್ ಗಳ ಜಯ ಗಳಿಸಿರುವ ಡೆಲ್ಲಿ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದೆ.
ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 184 ರನ್ ಗಳಿಸಿತು. ಆರಂಭದಲ್ಲಿ ಬೇಗನೇ ವಿಕೆಟ್ ಉದುರಿಸಿಕೊಂಡು ಸಂಕಷ್ಟದಲ್ಲಿದ್ದರೂ ಮಧ‍್ಯಮ ಕ್ರಮಾಂಕದಲ್ಲಿ ಶಿಮ್ರಾನ್ ಹೆಟ್ ಮೇರ್ 45, ಸ್ಟಾಯ್ನಿಸ್ 39 ಗಳಿಸಿದ್ದು ರಾಜಸ್ಥಾನ್ ಗೆ ನೆರವಾಯಿತು. ರಾಜಸ್ಥಾನ್ ಪರ ಜೋಫ‍್ರಾ ಆರ್ಚರ್ 3 ವಿಕೆಟ್ ಕಬಳಿಸಿದರು.
ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ರಾಜಸ್ಥಾನ್ 19.4 ಓವರ್ ಗಳಲ್ಲಿ ಕೇವಲ 138 ರನ್ ಗಳಿಗೆ ಆಲೌಟ್ ಆಯಿತು. ಯುವ ಯಶಸ್ವಿ ಜೈಸ್ವಾಲ್ 34, ನಾಯಕ ಸ್ಟೀವ್ ಸ್ಮಿತ್ 24, ರಾಹುಲ್ ತೆವಾತಿಯಾ 38 ರನ್ ಗಳಿಸಿದ್ದು ಬಿಟ್ಟರೆ ಉಳಿದವರಿಂದ ಪ್ರತಿರೋಧ ಬರಲಿಲ್ಲ. ಡೆಲ್ಲಿ ಪರ ಕಗಿಸೊ ರಬಾಡ 3 ವಿಕೆಟ್ ಕಬಳಿಸಿದರು.