Publish Date: Fri, 09 Oct 2020 (11:10 IST)
Updated Date: Fri, 09 Oct 2020 (11:11 IST)
ದುಬೈ: ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಆಟಗಾರ ವಿಂಡೀಸ್ ದೈತ್ಯ ಕ್ರಿಸ್ ಗೇಲ್ ಗೆ ಫುಡ್ ಪಾಯ್ಸನ್ ಆಗಿದ್ದು, ಇದೇ ಕಾರಣಕ್ಕೆ ಅವರು ನಿನ್ನೆಯ ಪಂದ್ಯವಾಡಿರಲಿಲ್ಲ.
ಕ್ರಿಸ್ ಗೇಲ್ ರನ್ನು ನಿನ್ನೆಯ ಪಂದ್ಯದಲ್ಲಿ ಆಡಿಸುವ ಉದ್ದೇಶವಿತ್ತು. ಆದರೆ ಫುಡ್ ಪಾಯ್ಸನ್ ಆಗಿರುವ ಕಾರಣಕ್ಕೆ ಅವರು ಆಡುವ ಸ್ಥಿತಿಯಲ್ಲಿರಲಿಲ್ಲ. ಹೀಗಾಗಿ ಅವರನ್ನು ಹೊರಗಿಡಲಾಯಿತು ಎಂದು ಪಂದ್ಯದ ನಂತರ ಕೋಚ್ ಅನಿಲ್ ಕುಂಬ್ಳೆ ಹೇಳಿದ್ದಾರೆ. ಮುಂದಿನ ಪಂದ್ಯಕ್ಕೆ ಅವರು ಲಭ‍್ಯರಾಗುವ ನಿರೀಕ್ಷೆಯಿದೆ. ಈ ಕೂಟದಲ್ಲಿ ಇದುವರೆಗೆ ಪಂಜಾಬ್ ಅವರಿಗೆ ಆಡುವ ಬಳಗದಲ್ಲಿ ಸ್ಥಾನ ನೀಡಿರಲಿಲ್ಲ.