Publish Date: Fri, 09 Oct 2020 (08:54 IST)
Updated Date: Fri, 09 Oct 2020 (08:56 IST)
ದುಬೈ: ಐಪಿಎಲ್ 13 ರಲ್ಲಿ ಯಾಕೋ ಕಿಂಗ್ಸ್ ಇಲೆವೆನ್ ಪಂಜಾಬ್ ಸೋಲಿನ ಸರಪಳಿಯಿಂದ ಹೊರಬರುವ ಲಕ್ಷಣ ಕಾಣುತ್ತಿಲ್ಲ. ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ 69 ರನ್ ಗಳ ಹೀನಾಯ ಸೋಲು ಅನುಭವಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ ಆರಂಭಿಕ ಡೇವಿಡ್ ವಾರ್ನರ್ (52) ಮತ್ತು ಜಾನಿ ಬೇರ್ ಸ್ಟೋ (97) ಭರ್ಜರಿ ಆಟದ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿತು. ಹೈದರಾಬಾದ್ ಬ್ಯಾಟಿಂಗ್ ಎದುರು ಪಂಜಾಬ್ ಗೆ ತಲೆಯೆತ್ತಲೂ ಆಗಲಿಲ್ಲ.
ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಪಂಜಾಬ್ ಕೇವಲ 16.5 ಓವರ್ ಗಳಲ್ಲಿ 132 ರನ್ ಗಳಿಗೆ ಆಲೌಟ್ ಆಯಿತು. ನಾಯಕ ಕೆಎಲ್ ರಾಹುಲ್ ಕೇವಲ 11 ರನ್ ಗಳಿಸಿದರು. ಇದ್ದವರಲ್ಲಿ ನಿಕಲಸ್ ಪೂರನ್ ಅವರೇ ಕೊಂಚ ಪ್ರತಿರೋಧ ತೋರಿದವರು. ಅವರು 37 ಎಸೆತಗಳಲ್ಲಿ ಬಿರುಸಿನ 77 ರನ್ ಗಳಿಸಿದರು. ಆದರೆ ಅವರಿಗೆ ತಕ್ಕ ಸಾಥ್ ಸಿಗದೇ ತಂಡ ಸೋತು ಹೋಯಿತು.