Publish Date: Thu, 08 Oct 2020 (11:50 IST)
Updated Date: Thu, 08 Oct 2020 (11:51 IST)
ಮುಂಬೈ: ಸೀಮಿತ ಓವರ್ ಗಳ ಪಂದ್ಯಗಳಲ್ಲಿ ವಿಕೆಟ್ ಕೀಪಿಂಗ್ ಕೂಡಾ ಮಾಡುವ ಮೂಲಕ ಕೆಎಲ್ ರಾಹುಲ್ ಟೀಂ ಇಂಡಿಯಾಗೆ ಉಪಯುಕ್ತ ಆಟಗಾರನೆನಿಸಿಕೊಂಡಿದ್ದರು. ಆದರೆ ಅವರು ವಿಕೆಟ್ ಕೀಪಿಂಗ್ ಮಾಡಬಾರದು ಎಂದು ಕ್ರಿಕೆಟ್ ದಿಗ್ಗಜ ಬ್ರಿಯಾನ್ ಲಾರಾ ಹೇಳಿದ್ದಾರೆ.
ರಾಹುಲ್ ವಿಕೆಟ್ ಕೀಪಿಂಗ್ ಜವಾಬ್ಧಾರಿ ಹೊರಬಾರದು. ಅವರಂತಹ ಶ್ರೇಷ್ಠ ಬ್ಯಾಟ್ಸ್ ಮನ್ ಕೇವಲ ಬ್ಯಾಟಿಂಗ್ ಕಡೆಗೆ ಗಮನ ಕೊಡಬೇಕು ಎಂದು ಲಾರಾ ಅಭಿಪ್ರಾಯಪಟ್ಟಿದ್ದಾರೆ. ರಾಹುಲ್ ಖಾಯಂ ವಿಕೆಟ್ ಕೀಪರ್ ಆಗಬಾರದು ಎಂದು ಅನೇಕ ಮಾಜಿ ಕ್ರಿಕೆಟಿಗರು ಅಭಿಪ್ರಾಯಪಡುತ್ತಿದ್ದಾರೆ. ಅದಕ್ಕೆ ಲಾರಾ ಕೂಡಾ ಧ್ವನಿಗೂಡಿಸಿದ್ದಾರೆ.