Select Your Language

Notifications

webdunia
webdunia
webdunia
Monday, 14 April 2025
webdunia

ಐಪಿಎಲ್ 13: ಕೊನೆಯ ಕ್ಷಣದಲ್ಲಿ ಸೋತ ಚೆನ್ನೈ

ಐಪಿಎಲ್ 13
ದುಬೈ , ಗುರುವಾರ, 8 ಅಕ್ಟೋಬರ್ 2020 (08:57 IST)
ದುಬೈ: ಗೆಲುವಿನ ಹಳಿಗೆ ಬಂತು ಎನ್ನುವಾಗ ಮತ್ತೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಅದೇ ತಪ್ಪು ಮಾಡಿ ಕೋಲ್ಕೊತ್ತಾ ನೈಟ್ ರೈಡರ್ಸ್ ವಿರುದ್ಧ ಸೋತಿದೆ. ಕೆಕೆಆರ್ ವಿರುದ್ಧದ ಪಂದ್ಯದಲ್ಲಿ 10 ರನ್ ಗಳ ಸೋಲುಂಡಿದೆ.


ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕೊತ್ತಾ ರಾಹುಲ್ ತ್ರಿಪಾಠಿ 81 ರನ್ ಗಳ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ 167 ರನ್ ಗಳಿಸಿತು. ನಾಯಕ ದಿನೇಶ್ ಕಾರ್ತಿಕ್ ಮತ್ತೊಮ್ಮೆ ವೈಫಲ್ಯ ಕಂಡರು.

ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ನಡೆಸಿದ ಚೆನ್ನೈ ಆರಂಭ ಉತ್ತಮವಾಗಿತ್ತು. ಶೇನ್ ವ್ಯಾಟ್ಸನ್ 50 ರನ್ ಗಳಿಸಿ ಮಿಂಚಿದರು. ಆದರೆ ಅವರ ವಿಕೆಟ್ ಉದುರುತ್ತಿದ್ದಂತೆ ಚೆನ್ನೈ ದಿಡೀರ್ ಕುಸಿತ ಕಂಡಿತು. ಅಂಬಟಿ ರಾಯುಡು 30, ರವೀಂದ್ರ ಜಡೇಜಾ 21 ರನ್ ಗಳಿಸಿದರಾದರೂ ತಂಡವನ್ನು ಗೆಲುವಿನ ಗುರಿ ಮುಟ್ಟಿಸುವಲ್ಲಿ ಸೋತರು. ಕೊನೆಯದಾಗಿ ಚೆನ್ನೈ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 157 ರನ್ ಗಳಿಸಲಷ್ಟೇ ಶಕ್ತವಾಯಿತು.

Share this Story:

Follow Webdunia kannada

ಮುಂದಿನ ಸುದ್ದಿ

ಇತಿಹಾಸ ಮಾಡಿದ್ದ ಕ್ರಿಕೆಟಿಗ ಅಲಿ ಖಾನ್ ಐಪಿಎಲ್ 13 ರಿಂದ ಔಟ್