Publish Date: Wed, 07 Oct 2020 (12:13 IST)
Updated Date: Wed, 07 Oct 2020 (12:14 IST)
ದುಬೈ: ಐಪಿಎಲ್ ಇತಿಹಾಸದಲ್ಲೇ ಮೊದಲ ಬಾರಿಗೆ ಅಮೆರಿಕಾ ಮೂಲದ ಆಟಗಾರನೊಬ್ಬನನ್ನು ಕೋಲ್ಕೊತ್ತಾ ನೈಟ್ ರೈಡರ್ಸ್ ತಂಡ ಖರೀದಿಸಿ ಸುದ್ದಿ ಮಾಡಿತ್ತು. ಆದರೆ ಇದೀಗ ಆಟಗಾರನ ರೂಪದಲ್ಲಿ ತಂಡಕ್ಕೆ ಆಘಾತ ಸಿಕ್ಕಿದೆ.
ಅಲಿ ಖಾನ್ ಗಾಯದ ಕಾರಣದಿಂದ ಐಪಿಎಲ್ ನಿಂದ ಹೊರಬಿದ್ದಿದ್ದಾರೆ. ವಿಶೇಷವೆಂದರೆ ಇದುವರೆಗೆ ಅಲಿ ಖಾನ್ ಒಂದೇ ಒಂದು ಐಪಿಎಲ್ ಪಂದ್ಯವಾಡಿಲ್ಲ. ಆದರೆ ದುರಾದೃಷ್ಟಕ್ಕೆ ಅಭ್ಯಾಸದಲ್ಲೇ ಗಾಯಗೊಂಡು ಐಪಿಎಲ್ ನಿಂದ ಹೊರಬರುವ ಪರಿಸ್ಥಿತಿ ಎದುರಾಗಿದೆ. ಆದರೆ ಅಧಿಕೃತವಾಗಿ ಕೆಕೆಆರ್ ತಂಡ ಇನ್ನಷ್ಟೇ ಈ ಬಗ್ಗೆ ಘೋಷಣೆ ಮಾಡಬೇಕಿದೆ.