Select Your Language

Notifications

webdunia
webdunia
webdunia
webdunia

ಕೆಜಿಎಫ್ 2 50 ನೇ ದಿನಕ್ಕೂ ಘೋಷಣೆಯಾಗದ ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾ: ಫ್ಯಾನ್ಸ್ ಗೆ ನಿರಾಸೆ

ಕೆಜಿಎಫ್ 2 50 ನೇ ದಿನಕ್ಕೂ ಘೋಷಣೆಯಾಗದ ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾ: ಫ್ಯಾನ್ಸ್ ಗೆ ನಿರಾಸೆ
ಬೆಂಗಳೂರು , ಬುಧವಾರ, 8 ಜೂನ್ 2022 (09:30 IST)
ಬೆಂಗಳೂರು: ಕೆಜಿಎಫ್ 2 ಸಿನಿಮಾ ಬಿಡುಗಡೆಯಾಗಿ 50 ದಿನಗಳೇ ಕಳೆದಿವೆ. ಆದರೂ ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾ ಇನ್ನೂ ಘೋಷಣೆಯಾಗಿಲ್ಲ. ಇದು ಅಭಿಮಾನಿಗಳ ನಿರಾಸೆಗೆ ಕಾರಣವಾಗಿದೆ.

ಈಗಾಗಲೇ ಯಶ್ ಮುಫ್ತಿ ಖ್ಯಾತಿಯ ನಿರ್ದೇಶಕ ನರ್ತನ್ ಜೊತೆ ಸಿನಿಮಾ ಮಾಡುತ್ತಾರೆ. ಅದು ಕೆಜಿಎಫ್ 2 50 ನೇ ದಿನದಂದು ಘೋಷಣೆಯಾಗಬಹುದು ಎಂದು ಅಭಿಮಾನಿಗಳು ಅಂದುಕೊಂಡಿದ್ದರು. ಆದರೆ ಅದು ನಿರಾಸೆಯಾಗಿದೆ.

ಯಶ್ ಮುಂದಿನ ಸಿನಿಮಾ ಇನ್ನೂ ಘೋಷಣೆಯಾಗಿಲ್ಲ. ಕೆಜಿಎಫ್ ಸಿನಿಮಾ ಸಕ್ಸಸ್ ನಂತರ ಯಶ್ ನ್ಯಾಷನಲ್ ಸ್ಟಾರ್ ಆಗಿ ಬೆಳೆದಿದ್ದಾರೆ. ಅವರ ಸ್ಟಾರ್ ಮಾರುಕಟ್ಟೆ ಈಗ ಹೆಚ್ಚಾಗಿದೆ. ಈ ಕಾರಣಕ್ಕೆ ಹೊಸ ಸಿನಿಮಾ ತಂಡ ಮತ್ತಷ್ಟು ಕತೆಯಲ್ಲಿ ಹೊಸತನ ತರಲು ಯತ್ನಿಸುತ್ತಿದೆ. ಈ ಕಾರಣಕ್ಕೆ ಘೋಷಣೆ ನಿಧಾನವಾಗುತ್ತಿದೆ ಎನ್ನಲಾಗಿದೆ. ಹೀಗಾಗಿ ಆ ದಿನಕ್ಕೋಸ್ಕರ ಅಭಿಮಾನಿಗಳು ಕಾಯಲೇಬೇಕಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಕ್ರಂ ನಿರ್ದೇಶಕನಿಗೆ ದುಬಾರಿ ಕಾರು ಗಿಫ್ಟ್ ನೀಡಿದ ಕಮಲ್ ಹಾಸನ್!