ಬೆಂಗಳೂರು: ಚಿರಂಜೀವಿ ಸರ್ಜಾ ಹೃದಯಾಘಾತದಿಂದ ಅಕಾಲಿಕವಾಗಿ ನಿಧನರಾಗಿ ಇಂದಿಗೆ ಎರಡು ವರ್ಷ ಕಳೆದಿದೆ. 2020 ರ ಜೂನ್ 7 ರಂದು ಚಿರು ಸರ್ಜಾ ಹೃದಯಾಘಾತದಿಂದ ನಿಧನರಾಗಿದ್ದರು.
ಇಂದು ಅವರ ಪುಣ್ಯಸ್ಮರಣೆಯಾಗಿದ್ದು, ಸಹೋದರ ಧ್ರುವ ಸರ್ಜಾ ಅಣ್ಣನ ನೆನಪಿನಲ್ಲಿ ಫೋಟೋ ಹಂಚಿಕೊಂಡು ಗೌರವ ಸಲ್ಲಿಸಿದ್ದಾರೆ.
ಚಿರು ತೀರಿಕೊಂಡಿದ್ದಾಗ ಮೇಘನಾ ತುಂಬು ಗರ್ಭಿಣಿಯಾಗಿದ್ದರು. ಇದೀಗ ಚಿರು ನೆನಪಾಗಿ ಅವರ ಮಗ ರಾಯನ್ ರಾಜ್ ಸರ್ಜಾ ಇದ್ದಾನೆ. ಅತ್ತ ಮೇಘನಾ ಕೂಡಾ ಕೆಲವು ಕಾಲದ ಬ್ರೇಕ್ ನ ನಂತರ ಈಗಷ್ಟೇ ಬಣ್ಣದ ಬದುಕಿನಲ್ಲಿ ಬ್ಯುಸಿಯಾಗಿ ತಮ್ಮ ನೋವು ಮರೆಯುವ ಪ್ರಯತ್ನ ಮಾಡುತ್ತಿದ್ದಾರೆ.