Publish Date: Wed, 19 Oct 2022 (08:50 IST)
Updated Date: Wed, 19 Oct 2022 (09:09 IST)
ಬೆಂಗಳೂರು: ಕಾಂತಾರ ಸಿನಿಮಾ ಮೂಲಕ ಇಡೀ ಸಿನಿಮಾ ಜಗತ್ತೇ ತಿರುಗಿ ನೋಡುವಂತೆ ಮಾಡಿರುವ ರಿಷಬ್ ಶೆಟ್ಟಿ ಸಿನಿಮಾಗೆ ಬರುವ ಮೊದಲು ಕ್ರಿಕೆಟಿಗರಾಗಲು ಬಯಸಿದ್ದರಂತೆ!
ರಿಷಬ್ ಸಿನಿಮಾಗೆ ಬರುವ ಮೊದಲು ಹಲವು ರೀತಿಯ ಉದ್ದಿಮೆಯಲ್ಲಿ ತೊಡಗಿಸಿಕೊಂಡಿದ್ದರು. ಹೋಟೆಲ್, ನೀರಿನ ಕ್ಯಾನ್ ಎಂದೆಲ್ಲಾ ಅವರು ಮಾಡದ ವ್ಯವಹಾರವಿಲ್ಲ.
ಆದರೆ ಇದಕ್ಕಿಂತಲೂ ಮೊದಲು ಅವರು ಕ್ರಿಕೆಟಿಗರಾಗಲು ಬಯಸಿದ್ದರಂತೆ ರಿಷಬ್. ಇದಕ್ಕಾಗಿ ಉತ್ತಮ ದರ್ಜೆಯ ಕ್ರಿಕೆಟ್ ಕಿಟ್ ನ್ನು ತರಿಸಿಕೊಂಡಿದ್ದರಂತೆ. ಆದರೆ ಅದ್ಯಾಕೋ ಕ್ರಿಕೆಟಿಗರಾಗಲಿಲ್ಲ. ಮತ್ತೆ ಅವರ ಮನಸ್ಸು ಸಿನಿಮಾದತ್ತ ಸೆಳೆಯಿತು.
-Edited by Rajesh Patil