Publish Date: Tue, 18 Oct 2022 (16:29 IST)
Updated Date: Tue, 18 Oct 2022 (16:32 IST)
ಬೆಂಗಳೂರು: ಪುನೀತ್ ರಾಜ್ ಕುಮಾರ್ ಕನಸಿನ ಕೂಸು ಗಂಧದ ಗುಡಿ ಸಾಕ್ಷ್ಯಚಿತ್ರ ಇದೇ ತಿಂಗಳ 28 ಕ್ಕೆ ಥಿಯೇಟರ್ ನಲ್ಲಿ ಬಿಡುಗಡೆಯಾಗುತ್ತಿದೆ.
ಇದೇ ಕೊನೇ ಬಾರಿ ಪ್ರೀತಿಯ ಅಪ್ಪು ಅವರನ್ನು ತೆರೆ ಮೇಲೆ ನೋಡುವ ಭಾಗ್ಯ ವೀಕ್ಷಕರದ್ದು. ಇದಕ್ಕೆ ಮೊದಲು 21 ರಂದು ಭರ್ಜರಿಯಾಗಿ ಪ್ರಿರಿಲೀಸ್ ಈವೆಂಟ್ ನಡೆಯಲಿದೆ.
ಇದರ ಜೊತೆಗೆ ಇನ್ನೊಂದು ಸಿಹಿ ಸುದ್ದಿ ಸಿಕ್ಕಿದ್ದು, ಪುನೀತ್ ನೆನಪಿಗಾಗಿ ಅವರ ಪತ್ನಿ ಅಶ್ವಿನಿ ಪುನೀತ್ ಗಂಧದ ಗುಡಿ ಸಾಕ್ಷ್ಯ ಚಿತ್ರಕ್ಕೆ ಧ್ವನಿ ನೀಡಲಿದ್ದಾರೆ. ಇದರಲ್ಲಿ ಕಾವ್ಯವೊಂದನ್ನು ಅಶ್ವಿನಿ ಧ್ವನಿಯಲ್ಲಿ ಹೇಳಲಾಗುತ್ತಿದೆ.
-Edited by Rajesh Patil