Publish Date: Mon, 17 Oct 2022 (09:30 IST)
Updated Date: Mon, 17 Oct 2022 (09:40 IST)
ಮುಂಬೈ: ಹೊಂಬಾಳೆ ಫಿಲಂಸ್ ನಿರ್ಮಾಣದ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾ ಹಿಂದಿಯಲ್ಲಿ ಭರ್ಜರಿ ಗಳಿಕೆ ಮಾಡುತ್ತಿದೆ.
ಅಕ್ಟೋಬರ್ 14 ರಂದು ಸಿನಿಮಾ ಹಿಂದಿಯಲ್ಲಿ ಡಬ್ ಆಗಿ ತೆರೆ ಕಂಡಿತ್ತು. ಮೊದಲ ದಿನವೇ ಇತರ ಡಬ್ಬಿಂಗ್ ಸಿನಿಮಾಗಳಿಗೆ ಹೋಲಿಸಿದರೆ ದಾಖಲೆ ಗಳಿಕೆ ಮಾಡಿತ್ತು.
ಇದೀಗ ಮೂರು ದಿನ ಕಳೆಯುವಷ್ಟರಲ್ಲಿ ಕಾಂತಾರ ಗಳಿಕೆ 8 ಕೋಟಿ ರೂ. ಗಳಿಕೆ ಮಾಡಿದೆ. ಕಾಂತಾರ ಒಟ್ಟಾರೆ ಗಳಿಕೆ 100 ಕೋಟಿ ರೂ. ಗಳಿಕೆ ದಾಟಿ ಯಶಸ್ವಿಯಾಗಿ ಮುನ್ನಗ್ಗುತ್ತಿದೆ.
-Edited by Rajesh Patil