Publish Date: Mon, 17 Oct 2022 (09:10 IST)
Updated Date: Mon, 17 Oct 2022 (09:18 IST)
ಬೆಂಗಳೂರು: ಡಾಲಿ ಧನಂಜಯ್ ಸಿಂಗಲ್ಲಾ? ಈ ಒಂದು ಪ್ರಶ್ನೆಯನ್ನು ಕಿಚ್ಚ ಸುದೀಪ್ ಬಿಗ್ ಬಾಸ್ ವೇದಿಕೆಯಲ್ಲಿ ಕೇಳಿದ್ದಾರೆ.
ಇದಕ್ಕೆ ಧನಂಜಯ್ ನಾನಿನ್ನೂ ಸಿಂಗಲ್. ಒಬ್ಬರೇ ಇರುವುದು ಖುಷಿ ಕೊಡುತ್ತದೆ ಎಂದು ಹೇಳಿ ನಾಚಿಕೊಂಡಿದ್ದಾರೆ. ಇದನ್ನು ನೋಡಿ ಕಿಚ್ಚ ಸುದೀಪ್ ಜೋರಾಗಿ ನಕ್ಕಿದ್ದಾರೆ. ಅವರ ಈ ನಗು ಅಭಿಮಾನಿಗಳಿಗೆ ಯಾಕೋ ಧನಂಜಯ್ ಹೇಳಿಕೆ ಮೇಲೆ ಅನುಮಾನ ಮೂಡಿಸಿದೆ.
ಧನಂಜಯ್-ಅಮೃತಾ ಅಯ್ಯಂಗಾರ್ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಫ್ಯಾನ್ಸ್ ಗೆ ಅನುಮಾನವಿದೆ. ಆದರೆ ಇಬ್ಬರೂ ಇದನ್ನು ನಿರಾಕರಿಸಿದ್ದಾರೆ. ಹಾಗಿದ್ದರೂ ಧನಂಜಯ್ ಮತ್ತು ಅಮೃತಾ ನಡುವಿನ ಗೆಳೆತನ ನೋಡಿ ಅಭಿಮಾನಿಗಳು ಇವರಿಬ್ಬರೂ ಮುಂದೆ ಜೋಡಿಯಾಗಬಹುದು ಎಂದೇ ಅನುಮಾನ ವ್ಯಕ್ತಪಡಿಸುತ್ತಾರೆ. ಹೀಗಾಗಿ ಧನಂಜಯ್ ಸಿಂಗಲ್ ಎಂದರೂ ಅಭಿಮಾನಿಗಳಿಗೆ ನಂಬಿಕೆಯಾಗಿಲ್ಲ.
-Edited by Rajesh Patil