Publish Date: Sat, 15 Oct 2022 (16:36 IST)
Updated Date: Sat, 15 Oct 2022 (16:37 IST)
ಮುಂಬೈ: ಹೊಂಬಾಳೆ ಫಿಲಂಸ್ ನಿರ್ಮಾಣದ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾದ ಮೊದಲ ದಿನವೇ ಭರ್ಜರಿ ಗಳಿಕೆ ಮಾಡಿದೆ.
ಕಾಂತಾರ ಹಿಂದಿ ವರ್ಷನ್ ನಿನ್ನೆ ಬಿಡುಗಡೆಯಾಗಿತ್ತು. ಮೊದಲ ದಿನ ಚಿತ್ರ 1.25 ಕೋಟಿ ರೂ. ಗಳಿಕೆ ಮಾಡಿದೆ. ಇತ್ತೀಚೆಗಿನ ಕೆಲವು ಡಬ್ ಸಿನಿಮಾಗಳಿಗೆ ಹೋಲಿಸಿದರೆ ಈ ಸಿನಿಮಾ ಅತ್ಯಧಿಕ ಗಳಿಕೆ ಮಾಡಿದೆ.
ಅದರಲ್ಲೂ ಆರ್.ಮಾಧವನ್ ಅವರ ರಾಕೆಟರಿ, ಚಿರಂಜೀವಿ-ಸಲ್ಮಾನ್ ಖಾನ್ ಅಭಿನಯದ ಗಾಡ್ ಫಾದರ್ ಕಲೆಕ್ಷನ್ ನ್ನೂ ಕಾಂತಾರ ಹಿಂದಿಕ್ಕಿದೆ. ಇಂದು ಮತ್ತು ನಾಳೆ ವೀಕೆಂಡ್ ನಲ್ಲಿ ಕಲೆಕ್ಷನ್ ಹೆಚ್ಚುವ ನಿರೀಕ್ಷೆಯಿದೆ.