Publish Date: Sun, 16 Oct 2022 (16:49 IST)
Updated Date: Sun, 16 Oct 2022 (16:50 IST)
ಹೈದರಾಬಾದ್: ಕನ್ನಡದ ಕಾಂತಾರ ಸಿನಿಮಾ ಈಗ ಪರಭಾಷೆಯವರೂ ತಿರುಗಿ ನೋಡುವಂತೆ ಮಾಡುತ್ತಿದೆ.
ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾವನ್ನು ಅನೇಕ ಪರಭಾಷಾ ಸ್ಟಾರ್ ಕಲಾವಿದರೂ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆ ಸಾಲಿಗೆ ಮೂಲತಃ ಕನ್ನಡತಿಯಾದ ಅನುಷ್ಕಾ ಶೆಟ್ಟಿ ಕೂಡಾ ಸೇರಿದ್ದಾರೆ.
ಬಾಹುಬಲಿ ನಟಿ ಕಾಂತಾರ ಸಿನಿಮಾ ವೀಕ್ಷಿಸಿ ಟ್ವೀಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಾಂತಾರ ಸಿನಿಮಾ ನೋಡಿದೆ. ಎಂಥಾ ಅದ್ಭುತ ಸಿನಿಮಾ. ಇಡೀ ಚಿತ್ರತಂಡಕ್ಕೆ ನನ್ನ ಅಭಿನಂದನೆಗಳು. ನೋಡಲು ಮರೆಯದಿರಿ ಎಂದು ಅನುಷ್ಕಾ ಟ್ವೀಟ್ ಮಾಡಿದ್ದಾರೆ.
-Edited by Rajesh Patil