ಬೆಂಗಳೂರು: ಕಾಂತಾರ ಬಳಿಕ ರಿಷಬ್ ಶೆಟ್ಟಿಗೆ ಸಿನಿಮಾ ರಂಗದಲ್ಲಿ ಬೇಡಿಕೆ ಹೆಚ್ಚಾಗಿದೆ. ಅವರ ಸಿನಿಮಾವೆಂದರೆ ಜನರಿಗೆ ಮೊದಲಿನಿಂದಲೂ ಒಂದು ರೀತಿಯ ಕುತೂಹಲವಿರುತ್ತದೆ. ಕಾಂತಾರ ಬಳಿಕ ಅವರ ನಿರ್ದೇಶನದ ಸಿನಿಮಾ ಮೇಲೆ ಕುತೂಹಲ ಮತ್ತಷ್ಟು ಹೆಚ್ಚಿಸಿದೆ. 
									
			
			 
 			
 
 			
					
			        							
								
																	ಕಾಂತಾರ ಸಿನಿಮಾಗಿಂತ ಮೊದಲು ರಿಷಬ್ ರುದ್ರಪ್ರಯಾಗ ಎನ್ನುವ ಮಹತ್ವದ ಪ್ರಾಜೆಕ್ಟ್ ಘೋಷಣೆ ಮಾಡಿದ್ದರು. ಲಾಕ್ ಡೌನ್ ಗೆ ಮೊದಲು ಈ ಸಿನಿಮಾದ ಲೊಕೇಷನ್ ಹುಡುಕಾಟವನ್ನೂ ನಡೆಸಿದ್ದರು. ಅನಂತ್ ನಾಗ್ ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಲಿದ್ದಾರೆ.
									
										
								
																	ಆದರೆ ಕೊರೋನಾ ಕಾರಣದಿಂದ ಸಿನಿಮಾ ಮುಂದೂಡಿಕೆಯಾಯಿತು. ಇದೀಗ ರಿಷಬ್ ಅಭಿನಯದ ಕೆಲವು ಸಿನಿಮಾಗಳು ಘೋಷಣೆಯಾಗಿವೆ. ಅದನ್ನು ಮುಗಿಸಿಕೊಂಡು ರುದ್ರಪ್ರಯಾಗ ಸಿನಿಮಾ ಮಾಡುವ ಸಾಧ‍್ಯತೆಯಿದೆ. ರುದ್ರಪ್ರಯಾಗ ಸಿನಿಮಾ ಉತ್ತರ ಕರ್ನಾಟಕದ ಹಿನ್ನಲೆಯ ಕತೆ ಹೊಂದಿದೆ. ಇದೂ ಕೂಡಾ ಒಂದು ಮೈಲಿಗಲ್ಲಿನ ಸಿನಿಮಾವಾಗುವ ನಿರೀಕ್ಷೆಯಿದೆ.
									
											
							                     
							
							
			        							
								
																	-Edited by Rajesh Patil