Select Your Language

Notifications

webdunia
webdunia
webdunia
webdunia

ಚಿರು ಹುಟ್ಟುಹಬ್ಬಕ್ಕೆ ಫೋಟೋ ಶೂಟ್

ಚಿರು ಹುಟ್ಟುಹಬ್ಬಕ್ಕೆ ಫೋಟೋ ಶೂಟ್
bangalore , ಸೋಮವಾರ, 17 ಅಕ್ಟೋಬರ್ 2022 (21:05 IST)
ಪತಿ ಚಿರಂಜೀವಿ ಸರ್ಜಾ ಹುಟ್ಟುಹಬ್ಬದ ಸಂದರ್ಭದಲ್ಲಿ ಮೇಘನಾ ರಾಜ್​ ಅವರ ಹೊಸ ಫೋಟೋ ಶೂಟ್​ ವೈರಲ್​ ಆಗಿದೆ. ಅಭಿಮಾನಿಗಳಿಗೆ ಈ ಫೋಟೋಗಳು ಸಖತ್ ಇಷ್ಟ ಆಗಿವೆ.. ರಾಣಿ ಗೆಟಪ್​ನಲ್ಲಿ ಮೇಘನಾ ರಾಜ್​ ಕಾಣಿಸಿಕೊಂಡಿದ್ದಾರೆ. ಚಿರಂಜೀವಿ ಸರ್ಜಾರನ್ನು ಮಹಾರಾಜನ ರೀತಿ ಚಿತ್ರಿಸುತ್ತಿರುವ ಭಂಗಿಯಲ್ಲಿ ಮೇಘನಾ ಪೋಸ್​ ನೀಡಿದ್ದಾರೆ. ಈ ಫೋಟೋಗಳು ತುಂಬಾ ಕಲರ್​ಫುಲ್​ ಆಗಿ ಮೂಡಿ ಬಂದಿವೆ. ಮಹಾರಾಣಿಯ ಅವತಾರ ತಾಳಿರುವ ಮೇಘನಾ ರಾಜ್​ ಅವರನ್ನು ಕಂಡು ಅಭಿಮಾನಿಗಳು ಕಣ್ಣರಳಿಸಿದ್ದಾರೆ. ಈ ಫೋಟೋಗಳ ಮೂಲಕ ಚಿರಂಜೀವಿ ಸರ್ಜಾಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಲಾಗಿದೆ. ರೆಟ್ರೋ ವೇಷದಲ್ಲಿಯೂ ಮೇಘನಾ ಫೋಟೋ ಶೂಟ್​ ಮಾಡಿಸಿದ್ದಾರೆ. ವಿಶೇಷ ಕಾನ್ಸೆಪ್ಟ್​ನೊಂದಿಗೆ ಈ ಫೋಟೋಗಳನ್ನು ಸೆರೆ ಹಿಡಿಯಲಾಗಿದೆ. ಇಂದು ಮೇಘನಾ ರಾಜ್​ ನಟನೆಯ ಹೊಸ ಸಿನಿಮಾ ಕೂಡ ಸೆಟ್ಟೇರುತ್ತಿದೆ. ಚಿರು ನಿಧನರಾದ ಬಳಿಕ ಅಭಿಮಾನಿಗಳು ಸೆಲೆಬ್ರೇಟ್​ ಮಾಡುತ್ತಿರುವ ಎರಡನೇ ವರ್ಷದ ಬರ್ತ್​ಡೇ ಇದಾಗಿದೆ. ಹುಟ್ಟುಹಬ್ಬದ ಸಂದರ್ಭದಲ್ಲಿ ಚಿರು ನೆನಪುಗಳನ್ನು ಮೆಲುಕು ಹಾಕಲಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಹಸ್ಯ ಬಾಯ್ಬಿಟ್ಟ ನಯನತಾರಾ-ವಿಘ್ನೇಶ್​