ಮೈಸೂರು: ಕರ್ನಾಟಕರ ರತ್ನ ಡಾ. ಪುನೀತ್ ರಾಜ್ ಕುಮಾರ್ ಗೆ ನಿಂದಿಸಿದ್ದ ವ್ಯಕ್ತಿಯ ಮನೆಗೆ ಅಭಿಮಾನಿಗಳು ಮುತ್ತಿಗೆ ಹಾಕಿದ್ದಾರೆ. ಕೊನೆಗೆ ಅವಮಾನ ಮಾಡಿದ ಯುವಕ ಕ್ಷಮೆ ಯಾಚಿಸಿ ಅಪ್ಪು ಫೋಟೋಗೆ ಪೂಜೆ ಮಾಡಿದ್ದಾನೆ. 
									
			
			 
 			
 
 			
					
			        							
								
																	ಪುಟ್ಟ ಎಂಬ ವ್ಯಕ್ತಿ ಪುನೀತ್ ರಾಜ್ ಕುಮಾರ್ ಗೆ ನಿಂದಿಸಿದ ವಿಡಿಯೋ ವೈರಲ್ ಆಗಿತ್ತು. ಇದು ಪುನೀತ್ ಅಭಿಮಾನಿಗಳನ್ನು ರೊಚ್ಚಿಗೇಳುವಂತೆ ಮಾಡಿತ್ತು.
									
										
								
																	ಕೊನೆಗೆ ಅಭಿಮಾನಿಗಳ ಪ್ರತಿಭಟನೆಗೆ ಬೆಚ್ಚಿದ ಯುವಕ ವಿಡಿಯೋ ಮಾಡಿ ಕ್ಷಮೆ ಯಾಚಿಸಿದ್ದಾನೆ. ಇನ್ನು ಮುಂದೆ ಇಂತಹ ತಪ್ಪು ಮಾಡಲ್ಲ ಎಂದು ಪ್ರಮಾಣ ಮಾಡಿದ್ದಾನೆ. ಬಳಿಕ ಅಪ್ಪು ಫೋಟೋಗೆ ಪೂಜೆ ಸಲ್ಲಿಸಿ ಮತ್ತೊಮ್ಮೆ ಕ್ಷಮೆ ಯಾಚಿಸಿದ್ದಾನೆ.
									
											
							                     
							
							
			        							
								
																	-Edited by Rajesh Patil