ಬೆಂಗಳೂರು: ಹೊಂಬಾಳೆ ಫಿಲಂಸ್ ನಿರ್ಮಾಣದ ಕಾಂತಾರ ಸಿನಿಮಾ 100 ಕೋಟಿ ಗಳಿಕೆ ಮಾಡಿದೆ. ಇದು ಇತ್ತೀಚೆಗಿನ ದಿನಗಳಲ್ಲಿ ಹೊಸದೇನಲ್ಲ. ಆದರೆ 100 ಕೋಟಿ ಗಳಿಕೆಯಲ್ಲಿ ಕಾಂತಾರ ಹೊಸ ದಾಖಲೆಯನ್ನೇ ಮಾಡಿದೆ.
ಕಾಂತಾರ ಸಿನಿಮಾ ಬಜೆಟ್ 18 ಕೋಟಿ ಎನ್ನಲಾಗಿದೆ. ಹೀಗಾಗಿ ಕೇವಲ 20 ಕೋಟಿ ರೂ.ಗಳೊಳಗೆ ನಿರ್ಮಾಣವಾಗಿ 100 ಕೋಟಿ ರೂ. ಗಳಿಕೆ ಮಾಡಿದ್ದು ದಾಖಲೆಯಾಗಿದೆ.
ಈ ರೀತಿ ಕಡಿಮೆ ಬಜೆಟ್ ನಲ್ಲಿ ನಿರ್ಮಾಣವಾಗಿ 100 ಕೋಟಿ ಗಳಿಕೆ ಮಾಡಿರುವ ಎರಡನೇ ಭಾರತೀಯ ಸಿನಿಮಾ ಎಂಬ ಹೆಗ್ಗಳಿಕೆಗೆ ಕಾಂತಾರ ಪಾತ್ರವಾಗಿದೆ.
-Edited by Rajesh Patil