Publish Date: Wed, 19 Oct 2022 (08:40 IST)
Updated Date: Wed, 19 Oct 2022 (09:04 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 9 ರಲ್ಲಿ ಇನ್ನೊಂದು ಜೋಡಿ ಸಿದ್ಧವಾಗುತ್ತಿದೆ. ರಾಕೇಶ್ ಮತ್ತು ಅಮೂಲ್ಯ ಇತ್ತೀಚೆಗೆ ಹೆಚ್ಚಾಗಿ ಜೊತೆಯಾಗಿರುವುದು ನೆಟ್ಟಿಗರು ಹೊಸ ಜೋಡಿ ಹುಟ್ಟಿಕೊಂಡಿರುವುದು ಕನ್ ಫರ್ಮ್ ಎನ್ನುತ್ತಿದ್ದಾರೆ.
ಇದರ ಜೊತೆಗೆ ಬಿಗ್ ಬಾಸ್ ಮನೆಯಲ್ಲಿ ಬಿಡುವಿನ ವೇಳೆಯಲ್ಲಿ ರಾಕೇಶ್ ಈ ಮನೆಯಲ್ಲಿ ತಮಗೆ ಯಾರ ಮೇಲೆ ಹೆಚ್ಚು ಪ್ರೀತಿಯಿದೆ ಎಂದು ಹೇಳಿಕೊಳ್ಳುತ್ತಾರೆ.
ಕೆಲವರ ಬಗ್ಗೆ ನನಗೆ ಸಾಫ್ಟ್ ಕಾರ್ನರ್ ಇದೆ. ನಿನ್ನ ಮೇಲೆ ನನಗೆ ಹೆಚ್ಚು ಅಫೆಕ್ಷನ್ ಇದೆ. ಹೀಗಾಗಿ ಏನೇ ನೆಗೆಟಿವ್, ಪಾಸಿಟಿವ್ ಇದ್ದರೂ ನೇರವಾಗಿ ಹೇಳ್ತೀನಿ ಎಂದು ರಾಕೇಶ್ ಹೇಳುತ್ತಾರೆ. ಇತ್ತೀಚೆಗೆ ಇಬ್ಬರೂ ಹೆಚ್ಚು ಜೊತೆ ಜೊತೆಯಾಗಿ ಕೂತು ಮಾತನಾಡುವುದು ಕಾಮನ್ ಆಗಿದೆ. ಅಲ್ಲಿಗೆ ಮತ್ತೊಂದು ಜೋಡಿ ರೆಡಿ ಎಂದು ನೆಟ್ಟಿಗರು ಮಾತಾಡಿಕೊಳ್ಳುತ್ತಿದ್ದಾರೆ.
-Edited by Rajesh Patil