Publish Date: Tue, 18 Oct 2022 (09:50 IST)
Updated Date: Tue, 18 Oct 2022 (10:07 IST)
ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಈ ವಾರ ಮನೆಯಿಂದ ಹೊರಹೋಗಲು ಏಳು ಮಂದಿ ನಾಮಿನೇಟ್ ಆಗಿದ್ದಾರೆ. ಈ ವಾರ ಓಪನ್ ನಾಮಿನೇಷನ್ ಮಾಡಲಾಗಿದೆ.
ಈ ವಾರ ಕಾವ್ಯ ಶ್ರೀ, ಮಯೂರಿ, ನೇಹಾ, ಪ್ರಶಾಂತ್ ಆರ್ಯವರ್ಧನ್ ಹಾಗೂ ದಿವ್ಯಾ ಉರುಡುಗ ಮತ್ತು ಸಾನ್ಯಾ ಅಯ್ಯರ್ ನೇರವಾಗಿ ಕ್ಯಾಪ್ಟನ್ ದೀಪಿಕಾರಿಂದ ನಾಮಿನೇಟ್ ಆಗಿದ್ದಾರೆ.
ನಾಮಿನೇಟ್ ಆದ ಬಳಿಕ ಕಾವ್ಯಾ ಗೌಡ ಪ್ರಶಾಂತ್ ಸಂಬರಗಿ ಮುಂದೆ ಬೇಸರ ವ್ಯಕ್ತಪಡಿಸಿದರು. ಕಾವ್ಯಾ ಶ್ರೀ ಅವರನ್ನು ಮನೆಯ ಮಹಿಳಾ ಸದಸ್ಯರೇ ನಾಮಿನೇಟ್ ಮಾಡಿದ್ದರು. ಹೀಗಾಗಿ ಹೆಣ್ಣಿಗೆ ಹೆಣ್ಣೇ ಶತ್ರು ಎಂದು ಕಾವ್ಯಾ ಬೇಸರ ವ್ಯಕ್ತಪಡಿಸಿದರು. ಪ್ರಶಾಂತ್ ಸಂಬರಗಿ ಜೊತೆ ಮಾತನಾಡುತ್ತಿದ್ದ ಕಾವ್ಯಾ ಈ ಮನೆಯಲ್ಲಿ ಹುಡುಗಿಯರದ್ದೇ ಒಂದು ಗ್ಯಾಂಗ್ ಇದೆ. ಅವರ ಜೊತೆ ಸೇರಿಲ್ಲ ಅಂದರೆ ನಾವು ನಾಮಿನೇಟ್ ಆಗ್ತೀವಿ ಎಂದು ಆರೋಪಿಸಿದ್ದಾರೆ.
-Edited by Rajesh Patil