Publish Date: Wed, 19 Oct 2022 (08:30 IST)
Updated Date: Wed, 19 Oct 2022 (09:00 IST)
ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ಪ್ರತೀ ಬಾರಿ ಹಾಡುಗಾರರು, ಹಾಡು ಬರೆಯುವವರಿಗೆ ಕಮ್ಮಿಯೇನಿಲ್ಲ. ಈ ಬಾರಿ ಆ ಕೆಲಸವನ್ನು ರೂಪೇಶ್ ರಾಜಣ್ಣ ಮಾಡಿದ್ದಾರೆ.
ಈ ಮೊದಲೊಂದು ಸೀಸನ್ ನಲ್ಲಿ ವಾಸುಕಿ ವೈಭವ್ ಬರೆದು ರಾಗ ಸಂಯೋಜಿಸಿದ್ದ ಹಾಡು ಭಾರೀ ಹಿಟ್ ಆಗಿತ್ತು. ಸ್ವತಃ ಕಿಚ್ಚ ಸುದೀಪ್ ಹಾಡಿನ ಮೋಡಿಗೆ ಮರುಳಾಗಿ ತಾವೇ ಹಾಡಿ ವಾಸುಕಿಗೆ ಉಡುಗೊರೆ ನೀಡಿದ್ದರು.
ಇದೀಗ ರೂಪೇಶ್ ರಾಜಣ್ಣ ನಿನ್ನೆಯ ದಿನ ಮನೆಯೊಳಗೆ ತಾವೇ ಹಾಡೊಂದನ್ನು ಬರೆದು ರಾಗ ಸಂಯೋಜಿಸಿದ್ದಾರೆ. ಇದು ಇನ್ನೂ ಪೂರ್ತಿಯಾಗಿಲ್ಲ. ಎಲ್ಲಾ ಪೂರ್ತಿಯಾದ ಮೇಲೆ ಈ ಹಾಡನ್ನು ಹಾಡೋಣ ಎಂದು ದಿವ್ಯಾ ಉರುಡುಗ ಬಳಿ ಹೇಳಿಕೊಂಡಿದ್ದಾರೆ. ಈ ಹಾಡು ಕಿಚ್ಚನ ಇಂಪ್ರೆಸ್ ಮಾಡುತ್ತಾ? ಕಾದು ನೋಡಬೇಕು.
-Edited by Rajesh Patil