Daily Horoscope

Select Your Language

Notifications

webdunia
webdunia
webdunia
webdunia

ರಾಜ್ ಬಿ ಶೆಟ್ಟಿ ಹೆಸರೂ ಹೇಳದ ರಿಷಬ್ ಶೆಟ್ಟಿ: ನೆಟ್ಟಿಗರದ್ದು ಒಂದೇ ಪ್ರಶ್ನೆ

Raj B Shetty-Rishab Shetty
Photo Credit: Instagram
ಬೆಂಗಳೂರು: ಅರ್ಜುನ್ ಜನ್ಯಾ ಚೊಚ್ಚಲ ನಿರ್ದೇಶನದ 45 ಸಿನಿಮಾ ಟ್ರೈಲರ್ ವೀಕ್ಷಿಸಿ ಅಭಿಪ್ರಾಯ ಹಂಚಿಕೊಂಡ ನಟ ರಿಷಬ್ ಶೆಟ್ಟಿ ವಿಮರ್ಶೆ ಮಾಡುವಾಗ ರಾಜ್ ಬಿ ಶೆಟ್ಟಿ ಹೆಸರೂ ಹೇಳಿಲ್ಲ. ಈ ಬಗ್ಗೆ ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.

ರಿಷಬ್ ಶೆಟ್ಟಿಯವರ ಈ ನಡೆ ರಾಜ್ ಬಿ ಶೆಟ್ಟಿ ಜೊತೆ ಎಲ್ಲವೂ ಸರಿಯಲ್ವಾ ಎಂಬ ವದಂತಿ ಹಬ್ಬುವಂತೆ ಮಾಡಿದೆ. 45 ಸಿನಿಮಾದಲ್ಲಿ ಶಿವರಾಜ್ ಕುಮಾರ್, ಉಪೇಂದ್ರ ಜೊತೆ ರಾಜ್ ಬಿ ಶೆಟ್ಟಿ ಕೂಡಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಆದರೆ ವಿಮರ್ಶೆ ಹೇಳುವಾಗ ಶಿವರಾಜ್ ಕುಮಾರ್ ಮತ್ತು ಉಪೇಂದ್ರ ಹೆಸರು ಮಾತ್ರ ಹೇಳಿದ್ದಾರೆ. ರಾಜ್ ಬಿ ಶೆಟ್ಟಿ ಹೆಸರೂ ಹೇಳಿಲ್ಲ. ಇದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

ಕಾಂತಾರ ಸಿನಿಮಾದ ಕ್ಲೈಮ್ಯಾಕ್ಸ್ ಸೀನ್ ಶೂಟಿಂಗ್ ಮಾಡಿದ್ದು ರಾಜ್ ಬಿ ಶೆಟ್ಟಿ. ಆದರೆ ಕಾಂತಾರ ಚಾಪ್ಟರ್ 1 ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ಎಲ್ಲೂ ಕಾಣಿಸಿಕೊಳ್ಳಲಿಲ್ಲ. ಕೊನೆಗೆ ಕಾಂತಾರ ಚಾಪ್ಟರ್ 1 ಬಿಡುಗಡೆ ಸಂದರ್ಭದಲ್ಲೂ ಸೋಷಿಯಲ್ ಮೀಡಿಯಾದಲ್ಲೆಲ್ಲೂ ಒಂದೇ ಒಂದು ವಿಶ್ ಕೂಡಾ ಮಾಡಿಲ್ಲ. ಇದು ಇಬ್ಬರ ನಡುವೆ ಸರಿಯಿಲ್ವಾ ಎಂಬ ಅನುಮಾನ ಮೂಡಿಸಿತ್ತು. ಇದೀಗ ರಾಜ್ ಬಿ ಶೆಟ್ಟಿ ಹೆಸರೂ ಹೇಳದೇ ಇರುವುದು ಈ ಅನುಮಾನ ಹೆಚ್ಚಿಸಿದೆ. ಇದಕ್ಕೆ ನೆಟ್ಟಿಗರು ಕಾಮೆಂಟ್ ಮಾಡಿದ್ದು 45 ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ಕೂಡಾ ಪ್ರಮುಖ ಪಾತ್ರ ವಹಿಸಿದ್ದಾರೆ. ಆದರೆ ಅವರ ಹೆಸರನ್ನು ಯಾಕೆ ಹೇಳಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ಗುರೂ ರಾಜ್ ಬಿ ಶೆಟ್ಟಿ ಕೂಡಾ ಇದ್ದಾರೆ.. ಯಾಕೆ ಅವರನ್ನು ಹೇಳಿಲ್ಲ ಎಂದು ಕೇಳಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಮದುವೆ ಬಳಿಕ ಮೊದಲ ಬಾರೀ ಒಟ್ಟಿಗೆ ಕಾಣಿಸಿಕೊಂಡ ಸಮಂತಾ- ರಾಜ್‌ ನಿಡಿಮೋರು