Select Your Language

Notifications

webdunia
webdunia
webdunia
Sunday, 13 April 2025
webdunia

ಮೂರು ತಿಂಗಳ ಪುತ್ರನಿಂದ ರಿಷಬ್ ಶೆಟ್ಟಿಗೆ ಪ್ರೀತಿಯ ಓಲೆ!

ರಿಷಬ್ ಶೆಟ್ಟಿ
ಬೆಂಗಳೂರು , ಬುಧವಾರ, 10 ಜುಲೈ 2019 (09:36 IST)
ಬೆಂಗಳೂರು: ನಿರ್ದೇಶಕ, ನಟ ರಿಷಬ್ ಶೆಟ್ಟಿಗೆ ಗಂಡು ಮಗುವಿನ ಜನನವಾಗಿ ಮೂರು ತಿಂಗಳು ಕಳೆದಿದೆಯಷ್ಟೇ. ಆಗಲೇ ರಿಷಬ್ ಗೆ ಮಗನಿಂದ ಪ್ರೀತಿಯ ಪತ್ರ ಸಿಕ್ಕಿದೆ! ಇದಕ್ಕೆ ಸ್ವತಃ ಆ ಹಸುಗೂಸೇ ಸಹಿಯೂ ಹಾಕಿದೆ!


ರಿಷಬ್ ಶೆಟ್ಟಿ ಪುತ್ರನಿಗೆ ನಿನ್ನೆ ಮೂರು ತಿಂಗಳು ತುಂಬಿದ ಸಂಭ್ರಮ. ಈ ಸಂದರ್ಭದಲ್ಲಿ ರಿಷಬ್ ಮತ್ತು ಪತ್ನಿ ಕೇಕ್ ಕಟ್ ಮಾಡುವ ಮೂಲಕ ಆ ಸಂಭ್ರಮ ಆಚರಿಸಿದ್ದಾರೆ. ಅಷ್ಟೇ ಅಲ್ಲ, ಇದನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿರುವ ರಿಷಬ್ ಪುತ್ರ ತಮಗೆ ಆತನ ಕಾಲಿನ ಗುರುತಿನ ಸಹಿ ಹಾಕಿದ ಪತ್ರ ಕೊಟ್ಟ ಬಗ್ಗೆ ಭಾವುಕರಾಗಿ ಬರೆದುಕೊಂಡಿದ್ದಾರೆ.

ಆಂಗ್ಲ ಭಾಷೆಯಲ್ಲಿ ಅಪ್ಪನಿಗೆ ಧನ್ಯವಾದ ಸಲ್ಲಿಸಿ ಬರೆದ ಪತ್ರವೊಂದಕ್ಕೆ ರಿಷಬ್ ಪುತ್ರ ಕಾಲಿನ ಗುರುತಿನ ಸಹಿ ನೀಡಿದ್ದಾನೆ! ಆದರೆ ಪತ್ರ ಬರೆದಿದ್ದು ಮಾತ್ರ ರಿಷಬ್ ಪತ್ನಿ ಪ್ರಗತಿ. ಅಲ್ಲದೆ, ಇದೇ ಮೊದಲ ಬಾರಿಗೆ ರಿಷಬ್ ತಮ್ಮ ಪುತ್ರನ ಫೋಟೋವನ್ನೂ ಪ್ರಕಟಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಾಲಿವುಡ್ ನಟಿ ಶ್ರೀದೇವಿ ಸಾವಿನ ಬಗ್ಗೆ ಸ್ಪೋಟಕ ಮಾಹಿತಿ ಹೊರ ಹಾಕಿದ ಮಾಜಿ ಪೊಲೀಸ್ ಅಧಿಕಾರಿ!