Select Your Language

Notifications

webdunia
webdunia
webdunia
webdunia

ಮೈಸೂರು ಅಭಿಮಾನಿಗಳಿಗೆ ಸ್ಪೆಷಲ್ ಥ್ಯಾಂಕ್ಸ್ ಹೇಳಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್

ಮೈಸೂರು ಅಭಿಮಾನಿಗಳಿಗೆ ಸ್ಪೆಷಲ್ ಥ್ಯಾಂಕ್ಸ್ ಹೇಳಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್
ಬೆಂಗಳೂರು , ಬುಧವಾರ, 10 ಜುಲೈ 2019 (08:42 IST)
ಬೆಂಗಳೂರು: ಯುವರತ್ನ ಸಿನಿಮಾ ಶೂಟಿಂಗ್ ಸಂದರ್ಭ ಮೈಸೂರಿನಲ್ಲಿ ಕೆಲವು ದಿನ ಕಳೆದಿದ್ದ ಪುನೀತ್ ರಾಜ್ ಕುಮಾರ್ ಅಲ್ಲಿನ ಅಭಿಮಾನಿಗಳಿಗೆ ವಿಶೇಷವಾಗಿ ಥ್ಯಾಂಕ್ಸ್ ಹೇಳಿದ್ದಾರೆ.


ಮೈಸೂರಿನ ಕಾಲೇಜು, ಮತ್ತಿತರ ಜಾಗದಲ್ಲಿ ಶೂಟಿಂಗ್ ಮಾಡುವಾಗ ಪ್ರತಿನಿತ್ಯ ಪವರ್ ಸ್ಟಾರ್ ನೋಡಲು ಕಾಣಿಕೆ ಹೊತ್ತು ಅಭಿಮಾನಿಗಳು ಜಮಾಯಿಸುತ್ತಿದ್ದರು. ಈ ಅಭಿಮಾನಿಗಳ ಜತೆ ಆದಷ್ಟು ಸೆಲ್ಫೀ, ಅಟೋಗ್ರಾಫ್ ನೀಡಿ ಖುಷಿ ಕೊಡಲು ಯತ್ನಿಸಿದ್ದೇನೆ. ಸಿಗದೇ ಇದ್ದವರು ಬೇಸರ ಮಾಡಿಕೊಳ್ಳಬೇಡಿ ಎಂದು ಅಪ್ಪು ಮನವಿ ಮಾಡಿದ್ದಾರೆ.

ಅಷ್ಟೇ ಅಲ್ಲದೆ, ಈ ಸಂದರ್ಭದಲ್ಲಿ ತಮ್ಮ ತಂದೆ ಡಾ.ರಾಜ್ ಕುಮಾರ್ ಅವರ ಅಪ್ಪಟ ಅಭಿಮಾನಿಯೊಬ್ಬರ ಬಗ್ಗೆ ವಿಶೇಷವಾಗಿ ಪುನೀತ್ ಹೇಳಿಕೊಂಡಿದ್ದಾರೆ. ಕಸ್ತೂರಿ ನಿವಾಸ ಎಂದು ಹೆಸರಿಟ್ಟುಕೊಂಡು ಮನೆ ತುಂಬಾ ಅಪ್ಪಾಜಿ ಫೋಟೋ, ಛಾಯಾಚಿತ್ರಗಳನ್ನು ಹಾಕಿಕೊಳ್ಳುವ ಅಭಿಮಾನಿಯೊಬ್ಬರ ಅಭಿಮಾನವನ್ನು ಕೊಂಡಾಡಿದ್ದಾರೆ. ಅಷ್ಟೇ ಅಲ್ಲದೆ, ಇಂತಹ ಅಭಿಮಾನಿಗಳಿಂದಲೇ ನಾವಿದ್ದೇವೆ. ನಿಮ್ಮ ಪ್ರೀತಿಗೆ ಚಿರ ಋಣಿ ಎಂದು ಪುನೀತ್ ಸಾಮಾಜಿಕ ಜಾಲತಾಣದ ಮೂಲಕ ವಿಶೇಷವಾಗಿ ಥ್ಯಾಂಕ್ಸ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಭುದೇವ, ಕಿಚ್ಚ ಸುದೀಪ್ ಜತೆ ಡ್ಯಾನ್ಸ್ ಮಾಡಿ ಟ್ರೋಲ್ ಗೊಳಗಾದ ಸಲ್ಮಾನ್ ಖಾನ್