Select Your Language

Notifications

webdunia
webdunia
webdunia
webdunia

ಬರ್ತ್ ಡೇ ದಿನ ಒಳ್ಳೆ ಸುದ್ದಿ ಕೊಟ್ಟ ರಿಷಬ್ ಶೆಟ್ಟಿ

ಬರ್ತ್ ಡೇ ದಿನ ಒಳ್ಳೆ ಸುದ್ದಿ ಕೊಟ್ಟ ರಿಷಬ್ ಶೆಟ್ಟಿ
ಬೆಂಗಳೂರು , ಸೋಮವಾರ, 8 ಜುಲೈ 2019 (09:17 IST)
ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ಸ್ಟಾರ್ ಗಳು ತಮ್ಮ ಬರ್ತ್ ಡೇ ದಿನ ಹೊಸ ಸಿನಿಮಾದ ಪೋಸ್ಟರ್, ಟೀಸರ್ ಹೊರಬಿಡುವುದು ಸಾಮಾನ್ಯವಾಗಿದೆ. ಈಗ ನಟ, ನಿರ್ದೇಶಕ ರಿಷಬ್ ಶೆಟ್ಟಿ ಕೂಡಾ ಇದನ್ನೇ ಮಾಡಿದ್ದಾರೆ.


ಇತ್ತೀಚೆಗಷ್ಟೇ ಬೆಲ್ ಬಾಟಂ ಸಿನಿಮಾದಲ್ಲಿ ನಾಯಕರಾಗಿ ನಟಿಸಿ ಸಕ್ಸಸ್ ಕಂಡಿದ್ದ ರಿಷಬ್ ನಿನ್ನೆ ತಮ್ಮ ಜನ್ಮದಿನ ಪ್ರಯುಕ್ತ ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ. ಕಿರಿಕ್ ಪಾರ್ಟಿ, ಕಾಸರಗೋಡು ಹಿಟ್ ಸಿನಿಮಾ ನಂತರ ರಿಷಬ್ ಶೆಟ್ಟಿ ನಿರ್ದೇಶನದ ಸಿನಿಮಾ ಯಾವಾಗ ನೋಡುತ್ತೇವೋ ಎಂಬ ಪ್ರೇಕ್ಷಕರ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ಬರ್ತ್ ಡೇ ದಿನವಾದ ನಿನ್ನೆ ರಿಷಬ್ ತಾವು ನಿರ್ದೇಶನ ಮಾಡಲಿರುವ ಹೊಸ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಮಾಡಿದ್ದಾರೆ. ‘ರುದ್ರಪ್ರಯಾಗ’ ಎನ್ನುವ ಹೊಸ ಸಿನಿಮಾ ತಮ್ಮ ಮುಂದಿನ ನಿರ್ದೇಶನದ ಸಿನಿಮಾ ಎಂದು ರಿಷಬ್ ಶೆಟ್ಟಿ ಘೋಷಿಸಿದ್ದಾರೆ. ಫಸ್ಟ್ ಲುಕ್ ನಲ್ಲಿ ಚಿರತೆ, ರಾಣಿ ಚೆನ್ನಮ್ಮ ಇತ್ಯಾದಿ ಚಿತ್ರಗಳಿದ್ದು, ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕುರುಕ್ಷೇತ್ರ ಅಡಿಯೋ ರಿಲೀಸ್ ಗಾಗಿ ಬೆಂಗಳೂರಲ್ಲೇ ನಿಂತ ಶಾಸಕ ಮುನಿರತ್ನ