Publish Date: Mon, 08 Jul 2019 (10:12 IST)
Updated Date: Mon, 08 Jul 2019 (10:14 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಖ್ಯಪಾತ್ರದಲ್ಲಿ ಅಭಿನಯಿಸಿರುವ ಮುನಿರತ್ನಿ ನಿರ್ಮಾಣದ ಕುರುಕ್ಷೇತ್ರ ಅಡಿಯೋ ರಿಲೀಸ್ ಕಾರ್ಯಕ್ರಮ ನಿನ್ನೆ ಸಂಜೆ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನೆರವೇರಿದೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಾಹೋರೇ ಹಾಡಿಗೆ ದುರ್ಯೋಧನನ ವೇಷದಲ್ಲಿ ಹೆಜ್ಜೆ ಹಾಕಿ ಭರ್ಜರಿಯಾಗಿ ಎಂಟ್ರಿ ಕೊಟ್ಟರು. ಕಾರ್ಯಕ್ರಮಕ್ಕೆ ನಟ ದರ್ಶನ್, ಹರಿಪ್ರಿಯಾ, ಶಶಿಕುಮಾರ್ ಸೇರಿದಂತೆ ಹಲವರು ಆಗಮಿಸಿದ್ದರು.
ಈ ಕಾರ್ಯಕ್ರಮ ಜೀ ಕನ್ನಡದಲ್ಲಿ ಸದ್ಯದಲ್ಲಿಯೇ ಪ್ರಸಾರವಾಗಲಿದೆ. ಹಾಡುಗಳ ಜತೆಗೆ ಚಿತ್ರದ ಟ್ರೈಲರ್ ಕೂಡಾ ಬಿಡುಗಡೆಯಾಗಿದ್ದು, ಯೂ ಟ್ಯೂಬ್ ನಲ್ಲಿ ವೈರಲ್ ಆಗಿದೆ.