ಬೆಂಗಳೂರು: ಸಾಮಾನ್ಯವಾಗಿ ಪ್ಯಾನ್ ಇಂಡಿಯಾ ಸಿನಿಮಾ ಸಕ್ಸಸ್ ಆದ ಮೇಲೆ ನಿರ್ದೇಶಕರು, ನಟರಿಗೆ ಪರಭಾಷೆಗಳಿಂದ ಆಫರ್ ಗಳ ಸುರಿಮಳೆಯಾಗುತ್ತದೆ.
ರಿಷಬ್ ಶೆಟ್ಟಿಗೂ ಈಗ ಅದೇ ಆಗಿದೆ. ಕಾಂತಾರ ಸಕ್ಸಸ್ ಬಳಿಕ ತೆಲುಗಿನಲ್ಲಿ ಅಲ್ಲು ಅರವಿಂದ್ ತಮ್ಮ ನಿರ್ಮಾಣದಲ್ಲಿ ಸಿನಿಮಾ ಮಾಡಿಕೊಡುವಂತೆ ರಿಷಬ್ ಗೆ ಆಫರ್ ಕೊಟ್ಟಿದ್ದರು.
ಪ್ರಶಾಂತ್ ನೀಲ್ ರಂತೇ ರಿಷಬ್ ಕೂಡಾ ತೆಲುಗಿಗೆ ಹಾರಬಹುದೇ ಎಂಬ ಆತಂಕ ಕನ್ನಡ ಪ್ರೇಕ್ಷಕರಿಗಿತ್ತು. ಆದರೆ ರಿಷಬ್ ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಕನ್ನಡದಲ್ಲೇ ಉತ್ತರಿಸಿದ್ದು, ನೋ ವೇ, ಚಾನ್ಸೇ ಇಲ್ಲ. ನಾನು ಕನ್ನಡದಲ್ಲೇ ಇರ್ತೀನಿ ಎಂದಿದ್ದಾರೆ. ಈ ಮೂಲಕ ಕನ್ನಡಿಗರ ಮನ ಗೆದ್ದಿದ್ದಾರೆ ಶೆಟ್ರು.
-Edited by Rajesh Patil