Publish Date: Fri, 21 Oct 2022 (16:03 IST)
Updated Date: Fri, 21 Oct 2022 (16:05 IST)
ಮುಂಬೈ: ಕನ್ನಡದ ಕಾಂತಾರ ಸಿನಿಮಾ ಬಾಲಿವುಡ್ಡಿಗರನ್ನೂ ರೋಮಾಂಚನಗೊಳಿಸಿದೆ. ಈ ಸಾಲಿಗೆ ಲೇಟೆಸ್ಟ್ ಸೇರ್ಪಡೆ ನಟಿ ಕಂಗನಾ ರನಾವತ್.
ಕಂಗನಾ ಕಾಂತಾರ ಸಿನಿಮಾ ನೋಡಿ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಮೂಲಕ ರಿಷಬ್ ಮತ್ತು ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
ಅಬ್ಬಾ. ಈ ಸಿನಿಮಾ ನೋಡಿ ನಾನು ಕಳೆದು ಹೋದೆ. ಈ ಹ್ಯಾಂಗ್ ಓವರ್ ನಿಂದ ಹೊರಗೆ ಬರಲು ಕನಿಷ್ಠ ಒಂದು ವಾರ ಬೇಕು. ಈಗಲೂ ನನಗೆ ರೋಮಾಂಚನವಾಗುತ್ತಿದೆ. ಕತೆ, ನಿರ್ದೇಶನ, ಆಕ್ಟಿಂಗ್ ಎಲ್ಲವೂ ಸೂಪರ್ಬ್. ಸಿನಿಮಾ ಎಂದರೆ ಹೀಗಿರಬೇಕು ಎಂದು ಕಂಗನಾ ಹೊಗಳಿದ್ದಾರೆ.
ಬಳಿಕ ಮತ್ತೊಂದು ಸಂದೇಶದ ಮೂಲಕ ಕಾಂತಾರ ಸಿನಿಮಾ ಮುಂದಿನ ಬಾರಿಗೆ ಆಸ್ಕರ್ ಗೆ ಪರಿಗಣನೆಯಾಗಬೇಕು. ಈ ಸಿನಿಮಾಗಿಂತ ಬೆಸ್ಟ್ ಸಿನಿಮಾ ಮುಂದೆ ಬರಬಹುದು. ಆದರೆ ಕಾಂತಾರದಲ್ಲಿ ಭಾರತದ ಮಣ್ಣಿನ ಕತೆಯಿದೆ. ಇಲ್ಲಿನ ಸಂಸ್ಕೃತಿಯ ಪರಿಚಯವಿದೆ. ಹೀಗಾಗಿ ಭಾರತ ಎಂದರೆ ಏನು ಎಂದು ವಿಶ್ವಕ್ಕೆ ತಿಳಿಯಲು ಈ ಸಿನಿಮಾ ಆಸ್ಕರ್ ಗೆ ಸ್ಪರ್ಧಿಸಬೇಕು ಎಂದು ಆಗ್ರಹಿಸಿದ್ದಾರೆ.
-Edited by Rajesh Patil