ಹೈದರಾಬಾದ್: ಕಾಂತಾರ ಸಿನಿಮಾ ತೆಲುಗು ಹಂಚಿಕೆ ಹಕ್ಕು ಪಡೆದುಕೊಂಡ ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ಅವರ ಗೀತಾ ಆರ್ಟ್ಸ್ ಸಂಸ್ಥೆಗೆ ಭಾರೀ ಲಾಭವಾಗಿದೆ.
ಕಾಂತಾರ ತೆಲುಗಿನಲ್ಲಿ ಭಾರೀ ಸದ್ದು ಮಾಡಿದ್ದು, ಗಳಿಕೆಯಲ್ಲೂ ಸಾಧನೆ ಮಾಡಿದೆ. ಇದರಿಂದ ಅಲ್ಲು ಅರವಿಂದ್ ಗೆ ಭಾರೀ ಲಾಭವಾಗಿದೆ. ಇದೇ ಖುಷಿಯಲ್ಲಿ ಅಲ್ಲು ಅರವಿಂದ್ ರಿಷಬ್ ಶೆಟ್ಟಿಗೆ ತಮ್ಮ ನಿರ್ಮಾಣ ಸಂಸ್ಥೆಯಲ್ಲಿ ಸಿನಿಮಾ ಮಾಡುವಂತೆ ಕೇಳಿಕೊಂಡಿದ್ದಾರಂತೆ.
ಇದಕ್ಕೆ ರಿಷಬ್ ಕೂಡಾ ಒಪ್ಪಿದ್ದಾರೆ ಎಂದು ಸ್ವತಃ ಅಲ್ಲು ಅರವಿಂದ್ ಹೇಳಿಕೊಂಡಿದ್ದಾರೆ. ಹೀಗಾಗಿ ರಿಷಬ್ ಮುಂದೆ ತೆಲುಗಿಗೆ ಹಾರಲಿರುವುದು ಪಕ್ಕಾ.
-Edited by Rajesh Patil