ಬೆಂಗಳೂರು: ಜೋಗಿ ಪ್ರೇಮ್ ನಿರ್ದೇಶನದ ಧ್ರುವ ಸರ್ಜಾ ನಾಯಕರಾಗಿರುವ ಸಿನಿಮಾಗೆ ಟೈಟಲ್ ಅನಾವರಣಗೊಂಡಿದೆ.
ನಿನ್ನೆ ಸಂಜೆ ನಡೆದ ಕಾರ್ಯಕ್ರಮದಲ್ಲಿ ಶೀರ್ಷಿಕೆ ಅನಾವರಣಗೊಳಿಸಲಾಯಿತು. ಈ ಸಿನಿಮಾಗೆ ಕೆ.ಡಿ. ಎಂದು ಟೈಟಲ್ ಫಿಕ್ಸ್ ಆಗಿದೆ.
ಈ ಕಾರ್ಯಕ್ರಮದಲ್ಲಿ ಪ್ರೇಮ್ ದಂಪತಿ, ಧ್ರುವ ಸರ್ಜಾ, ಬಾಲಿವುಡ್ ನಟ ಸಂಜಯ್ ದತ್ ಕೂಡಾ ಪಾಲ್ಗೊಂಡಿದ್ದರು. ಸಂಜಯ್ ದತ್ ಕೆಜಿಎಫ್ ಬಳಿಕ ಮತ್ತೆ ಕನ್ನಡ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.
-Edited by Rajesh Patil