Publish Date: Fri, 21 Oct 2022 (10:00 IST)
Updated Date: Fri, 21 Oct 2022 (10:00 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 9 ರಲ್ಲಿ ತಮ್ಮ ವರ್ತನೆಗಳಿಂದಲೇ ಮನರಂಜನೆ ಒದಗಿಸುತ್ತಿರುವ ಆರ್ಯವರ್ಧನ್ ಗುರೂಜಿ ಮನೆಯವರಿಗೆ ಮುಜುಗುರ ಉಂಟು ಮಾಡಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಕೊಡುವ ಟಾಸ್ಕ್ ಪೂರ್ತಿ ಮಾಡಬೇಕಾದರೆ ಸ್ಪರ್ಧಿಗಳು ಗಂಟೆಗಟ್ಟಲೆ ಸ್ಥಳ ಬಿಟ್ಟು ಅಲ್ಲಾಡದೇ ನಿಲ್ಲುವ ಪರಿಸ್ಥಿತಿ ಎದುರಾಗುವುದು ಸಹಜ. ಇಂತಹದ್ದೇ ಟಾಸ್ಕ್ ಒಂದರಲ್ಲಿ ನಿನ್ನೆ ರಾತ್ರಿಯಿಡೀ ಸ್ಪರ್ಧಿಗಳು ನಿಲ್ಲಬೇಕಾಗಿ ಬಂದಿತ್ತು.
ಆರ್ಯವರ್ಧನ್ ಗುರೂಜಿಗೆ ಬಾತ್ ರೂಂಗೆ ಹೋಗಲು ಅರ್ಜೆಂಟಾಗಿತ್ತು. ಆದರೆ ಅತ್ತ ಟಾಸ್ಕ್ ಬಿಡಲೂ ಮನಸ್ಸಾಗದ ಗುರೂಜಿ ನಿಂತಲ್ಲೇ ಸುಸ್ಸು ಮಾಡಿಬಿಟ್ಟಿದ್ದಾರೆ. ಇದನ್ನು ನೋಡಿದ ಇತರ ಸ್ಪರ್ಧಿಗಳು ಗಾಬರಿ ಬಿದ್ದಿದ್ದಾರೆ. ಬಳಿಕ ಗುರೂಜಿಯನ್ನು ನೋಡಿ ನಕ್ಕೂ ನಕ್ಕೂ ಸುಸ್ತಾಗಿದ್ದಾರೆ. ಗಾರ್ಡನ್ ಏರಿಯಾದಲ್ಲಿ ಟಾಸ್ಕ್ ನಡೆಯುತ್ತಿದ್ದ ಕಾರಣಕ್ಕೆ ಬಚಾವ್. ಆದರೂ ಟಾಸ್ಕ್ ಮುಗಿದ ಬಳಿಕ ಮಯೂರಿ ನಾನು ಅವರು ಅದನ್ನು ನೋಡಿಬಿಟ್ಟೆ ಎಂದು ಇತರ ಸ್ಪರ್ಧಿಗಳಿಗೆ ಹೇಳಿ ನಕ್ಕಿದ್ದಾರೆ. ಇನ್ನು, ರೂಪೇಶ್ ರಾಜಣ್ಣ ಒಂದೆಡೆ ಟಾಸ್ಕ್ ನಿಂದ ರಾತ್ರಿಯಿಡೀ ನಿದ್ರೆಯಿಲ್ಲದೇ ಮೈ ಕೈ ನೋವು ಬಂತು ಇನ್ನೊಂದೆಡೆ ಆರ್ಯವರ್ಧನ್ ಗುರೂಜಿ ಸಹಿಸಿಕೊಂಡು ಸಾಕಾಯ್ತು ಎಂದು ಬಿಗ್ ಬಾಸ್ ಬಳಿ ಹೇಳಿಕೊಂಡರು.
-Edited by Rajesh Patil