Publish Date: Wed, 19 Oct 2022 (16:28 IST)
Updated Date: Wed, 19 Oct 2022 (16:31 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ನಿರೂಪಕರಾಗಿರುವ ಕಿಚ್ಚ ಸುದೀಪ್ ಈ ವಾರಂತ್ಯದ ಶೋಗೆ ಬರುವುದು ಅನುಮಾನವಾಗಿದೆ.
ಕಿಚ್ಚ ಸುದೀಪ್ ನಿನ್ನೆಯಷ್ಟೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ಈ ಹಿನ್ನಲೆಯಲ್ಲಿ ಅವರು ಪತ್ನಿ ಜೊತೆ ಆಸ್ಟ್ರೇಲಿಯಾಗೆ ಪ್ರವಾಸ ಕೈಗೊಂಡಿದ್ದಾರೆ.
ಹೀಗಾಗಿ ಈ ವಾರಂತ್ಯದ ಶೋಗೆ ಬರುವುದು ಅನುಮಾನ ಎನ್ನಲಾಗಿದೆ. ಅಷ್ಟೇ ಅಲ್ಲದೆ, ಗಂಧದ ಗುಡಿ ಪ್ರಿ ರಿಲೀಸ್ ಈವೆಂಟ್ ಗೂ ಅವರು ಗೈರಾಗುವ ಸಾಧ್ಯತೆಯಿದೆ.
-Edited by Rajesh Patil