Publish Date: Fri, 21 Oct 2022 (18:55 IST)
Updated Date: Fri, 21 Oct 2022 (18:57 IST)
ಬೆಂಗಳೂರು: ಕಾಂತಾರ ಸಿನಿಮಾ ಬಗ್ಗೆ ಕ್ಯಾತೆ ತೆಗೆದಿದ್ದ ನಟ ಚೇತನ್ ಅಹಿಂಸಾ ವಿರುದ್ಧ ಮಡಿಕೇರಿಯಲ್ಲಿ ದೂರು ದಾಖಲಾಗಿದೆ.
ಕಾಂತಾರ ಸಿನಿಮಾದಲ್ಲಿ ತೋರಿಸಲಾಗಿರುವ ಭೂತಕೋಲದ ಮೂಲ ಹಿಂದೂ ಧರ್ಮವಲ್ಲ ಎಂಬ ಹೇಳಿಕೆ ನೀಡಿ ಚೇತನ್ ಆಕ್ರೋಶಕ್ಕೆ ಗುರಿಯಾಗಿದ್ದರು.
ದೈವಾರಾಧನೆಯ ಬಗ್ಗೆ ಇಲ್ಲಸಲ್ಲದ ಹೇಳಿಕೆ ನೀಡಿ ಸಮಾಜದಲ್ಲಿ ಶಾಂತಿ ಕದಡುವ ಪ್ರಯತ್ನ ನಡೆಸುತ್ತಿದ್ದಾರೆಂದು ಯುವಸೇನೆ ಮುಖಂಡ ಕುಲ್ಲೀಪ್ ಪೂಣಚ್ಚ ಹಾಗೂ ಉಪಾಧ್ಯಕ್ಷ ಪ್ರವೀಣ್ ಮಡಿಕೇರಿಯಲ್ಲಿ ದೂರು ನೀಡಿದ್ದಾರೆ.
-Edited by Rajesh Patil