Select Your Language

Notifications

webdunia
webdunia
webdunia
webdunia

ತಮಿಳು ನಟ ವಿಜಯ್ ಗೆ ಶ್ರದ್ಧಾಂಜಲಿ ಹೇಳಿದವರ ವಿರುದ್ಧ ಕಿಡಿ ಕಾರಿದ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್

ತಮಿಳು ನಟ ವಿಜಯ್ ಗೆ ಶ್ರದ್ಧಾಂಜಲಿ ಹೇಳಿದವರ ವಿರುದ್ಧ ಕಿಡಿ ಕಾರಿದ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್
ಚೆನ್ನೈ , ಮಂಗಳವಾರ, 30 ಜುಲೈ 2019 (09:24 IST)
ಚೆನ್ನೈ: ಇಳಯದಳಪತಿ ಎಂದೇ ಖ್ಯಾತರಾಗಿರುವ ನಟ ವಿಜಯ್ ಸಾವಿನ ಬಗ್ಗೆ ಸುಳ್ಳು ಸುದ್ದಿಯೊಂದು ಟ್ವಿಟರ್ ನಲ್ಲಿ ಟ್ರೆಂಡ್ ಆಗಿರುವುದಕ್ಕೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ವಿಜಯ್ ಗೆ ಶ್ರದ್ಧಾಂಜಲಿ ಸಲ್ಲಿಸುವಂತೆ ‘ಆರ್ ಐಪಿವಿಜಯ್’ ಎಂಬ ಹ್ಯಾಶ್ ಟ್ಯಾಗ್ ಟ್ರೆಂಡ್ ಆಗಿರುವುದಕ್ಕೆ ತಮಿಳುನಾಡು ಮೂಲದ ಟೀಂ ಇಂಡಿಯಾ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ಸೇರಿದಂತೆ ವಿಜಯ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೇಶದಲ್ಲಿ ನೆರೆ, ಬರ ಮುಂತಾದ ಹಲವು ವಿನಾಶಗಳಿಂದ ದೇಶ ಸಂಕಷ್ಟದಲ್ಲಿದೆ. ಇದರ ಬಗ್ಗೆ ಮಾತನಾಡುವುದು ಬಿಟ್ಟು ಕೆಲವರಿಗೆ ವಿಜಯ್ ಆರ್ ಐಪಿ ಎಂದು ಟ್ರೆಂಡ್ ಮಾಡುವುದರಲ್ಲೇ ಆಸಕ್ತಿ ಹೆಚ್ಚಿದಂತಿದೆ ಎಂದು ಅಶ್ವಿನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಜಯ್ ಅಭಿಮಾನಿಗಳೂ ಈ ರೀತಿ ಸುಳ್ಳು ಸುದ್ದಿ ಹಬ್ಬಿಸುತ್ತಿರುವವರ ವಿರುದ್ಧ ಕಿಡಿ ಕಾರಿದ್ದಾರೆ. ಇಂತಹ ಸುದ್ದಿಗಳನ್ನು ಟ್ರೆಂಡ್ ಮಾಡುವುದನ್ನು ಮೊದಲು ನಿಲ್ಲಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಭಿಮಾನಿಗಳ ಒತ್ತಾಯದ ಮೇರೆಗೆ ಗಾಳಿಪಟ 2 ರಲ್ಲೂ ಗೋಲ್ಡನ್ ಸ್ಟಾರ್ ಗಣೇಶ್