Publish Date: Sat, 20 Jul 2019 (09:37 IST)
Updated Date: Sat, 20 Jul 2019 (09:41 IST)
ಹೈದರಾಬಾದ್: ಬಾಹುಬಲಿ ನಂತರ ಪ್ರಭಾಸ್ ಸಿನಿಮಾ ಸಾಹೋ ಆಗಸ್ಟ್ 15 ರಂದು ಬಿಡುಗಡೆಯಾಗಬೇಕಿತ್ತು. ಆದರೆ ಆ ಬಗ್ಗೆ ಇದೀಗ ಅಭಿಮಾನಿಗಳಿಗೆ ನಿರಾಶೆಯ ಸುದ್ದ ಬಂದಿದೆ.
ಈಗಾಗಲೇ ಸಾಹೋ ಟ್ರೈಲರ್ ಮೂಲಕ ಭಾರೀ ನಿರೀಕ್ಷೆ ಹುಟ್ಟಿಸಿದೆ. ವರ್ಷದ ಬಳಿಕ ಬಿಡುಗಡೆಯಾಗುತ್ತಿರುವ ಪ್ರಭಾಸ್ ಸಿನಿಮಾ ಬಗ್ಗೆ ಅಭಿಮಾನಿಗಳೂ ಸಾಕಷ್ಟು ನಿರೀಕ್ಷೆಯಿಟ್ಟುಕೊಂಡಿದ್ದರು.
ಆದರೆ ಈ ಮೊದಲೇ ಚಿತ್ರತಂಡ ಹೇಳಿದಂತೆ ಆಗಸ್ಟ್ 15 ರಂದು ಚಿತ್ರಬಿಡುಗಡೆಯಾಗುತ್ತಿಲ್ಲ. ಬದಲಾಗಿ ಮತ್ತೂ ಹದಿನೈದು ದಿನ ಮುಂದಕ್ಕೆ ಹೋಗಿ ಆಗಸ್ಟ್ 30 ರಂದು ಬಿಡುಗಡೆಯಾಗುತ್ತಿದೆ ಎಂದು ಚಿತ್ರತಂಡದಿಂದ ಮಾಹಿತಿ ಬಂದಿದೆ. ಪ್ರೇಕ್ಷಕರಿಗೆ ಅತ್ಯುತ್ತಮ ರಸದೌತಣ ಉಣಬಡಿಸುವುದು ನಮ್ಮ ಗುರಿ. ಅದಕ್ಕೆ ಕೊಂಚ ಸಮಯ ಬೇಕಾಗಿದೆ. ಹೀಗಾಗಿ ಚಿತ್ರ ಬಿಡುಗಡೆ ಮುಂದಕ್ಕೆ ಹಾಕಿರುವುದಾಗಿ ಚಿತ್ರತಂಡ ಸ್ಪಷ್ಟಪಡಿಸಿದೆ.